ಕ್ರಿಕೆಟಿಗ ಶಿಖರ್ ಧವನ್ ಕೊನೆಗೂ ತಮ್ಮ ಪತ್ನಿ ಆಯೇಷಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲ ನ್ಯಾಯಾಲಯ ಬುಧವಾರ ವಿಚ್ಛೇದನವನ್ನು ಅನುಮೋದಿಸಿದ್ದು, ಆಯೇಷಾ ತಮ್ಮ ಪತಿ ಶಿಖರ್ ಧವನ್ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಶಿಖರ್ ಧವನ್ ಪತ್ನಿ ಆಯೇಷಾ ಮೇಲೆ ಆರೋಪ ಮಾಡಿದ್ದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ಅವರ ಪತ್ನಿಯ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದು, ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಆಯೇಷಾ ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.
ಆಯೇಷಾ ಆಸ್ಟ್ರೇಲಿಯಾದಲ್ಲಿ ವಾಸಿಸುವ ಮೂಲಕ ಮತ್ತು ವರ್ಷಗಳ ಕಾಲ ಮಗನನ್ನು ತಮ್ಮಿಂದ ದೂರವಿಟ್ಟು “ಲಾಂಗ್ ಡಿಸ್ಟೆನ್ಸ್ ಮ್ಯಾರೇಜ್” ಗೆ ಬಲವಂತಪಡಿಸಿದ್ದರಿಂದ ಶಿಖರ್ ಧವನ್ ಮಾನಸಿಕ ಹಿಂಸೆಗೆ ಒಳಗಾಗಿದ್ದರು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





