ಆನೇಕಲ್: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮಧುರೈ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು ಆರೋಪಿ ಜೊತೆ ಮತ್ತೊರ್ವನಿದ್ದು ಆತ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ ಇನ್ನು ಆರೋಪಿ ತನ್ನ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ಅತ್ತಿಬೆಲೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ ಇನ್ನು ಆರೋಪಿಯಿಂದ 125 ಪ್ಯಾಕೆಟ್ ನಲ್ಲಿದ್ದ 250ಕೆಜಿ ಗಾಂಜಾ ವಶಕ್ಕೆ ಪಡೆದಿದ್ದು ಆರೋಪಿ ಬಳಿ ಆಂಧ್ರ ಕೇರಳ ತಮಿಳುನಾಡು ಹಾಗೂ ರಾಜ್ಯದ ನಂಬರ್ ಪ್ಲೇಟ್ ವಶಕ್ಕೆ ಪಡೆಯಲಾಗಿದು ಆರೋಪಿ ಆಯಾ ರಾಜ್ಯ ಪ್ರವೇಶಿಸಿದಾಗ ಆಯಾ ರಾಜ್ಯದ ನಂಬರ್ ಪ್ಲೇಟ್ ನ್ನು ಕಾರಿಗೆ ಅಳವಡಿಸುತ್ತಿದ್ದ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





