Breaking News

ಬಿಜೆಪಿಯಿಂದ ಆಪರೇಷನ್ ಕಮಲಕ್ಕಾಗಿ ಐದು ಕೋಟಿ ಆಮಿಷ

ಕೋಲಾರ: ಬಿಜೆಪಿಯ ಮೂವರು ಮುಖಂಡರು ಆಪರೇಷನ್ ಕಮಲ ಬಾಬತ್ತು ಐದು ಕೋಟಿ ಆಮಿಷ ಒಡ್ಡಿದ್ದು ನಿಜ.ಎಸಿಬಿ ಅಧಿಕಾರಿಗಳ ಒತ್ತಡದಿಂದ ಬಿಜೆಪಿ ವಿರುದ್ದದ ಆಮಿಷ ಆರೋಪವನ್ನು ನಿರಾಕರಿಸಿದ್ದೇನೆ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ‌
ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ಐದು ಕೋಟಿ ರುಪಾಯಿ ಆಮಿಷ ಒಡ್ಡಿದ್ದರು.
ಇದೀಗ ಸದನದಲ್ಲಿ ಸರ್ಕಾರಕ್ಕೆ ತೊಂದರೆ ಆದಾಗ ನೋಡಿಕೊಂಡಿರಲು ಸಾಧ್ಯವಿಲ್ಲ.
ಎಸಿಬಿ ಅಧಿಕಾರಿಗಳ ಬಲವಂತದಿಂದ ನಾನು ದೂರನ್ನು ನಿರಾಕರಿಸದ್ದೇನೆ. ನನ್ನ ವಿರುದ್ದದ ಹಕ್ಕುಚ್ಯುತಿ ಬಗ್ಗೆ ಸೂಕ್ತ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *