Breaking News

ಆನೇಕಲ್ ತಾಲ್ಲೂಕಿನಲ್ಲಿ ನೀರಿಗಾಗಿ ಜನರ ಪರದಾಟ ಗಮನ ಹರಿಸಬೇಕಾದ ಶಾಸಕರು ರೆಸಾರ್ಟ್ನಲ್ಲಿ ವಾಸ

ಆನೇಕಲ್:ಈ ಬಾರಿ ಅದೇಕೋ ಮುಂಗಾರು ಮಳೆ ಕೈಕೊಟ್ಟಿದ್ದು ನೀರಿಗಾಗಿ ಜನರು ಪರಿತಪಿಸುವಂತಾಗಿದೆ,ಹೌದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಾದ್ಯಂತ ಜನತೆ ಕುಡಿಯುವ ನೀರು ಹಾಗು ದಿನನಿತ್ಯದ ಬಳಕೆಗೆ ಬೇಕಾದ ನೀರಿಗಾಗಿ ಕಂಗೆಟ್ಟು ಹೋಗಿದ್ದಾರೆ,ಆನೇಕಲ್ ಪಟ್ಟಣದಲ್ಲಿ ಮೊದಲು ಒಂದು ವಾರಕ್ಕೆ ಒಮ್ಮೆ ನೀರು ಸರಬರಾಜು ಆಗುತ್ತಿತ್ತು ಇದೀಗ ಒಂದು ತಿಂಗಳಾದರೂ ಸಹ ನೀರು ಸರಬರಾಜು ಮಾಡದೆ ಜನರು ನೀರಿಲ್ಲದೆ ಬಿಂದಿಗೆಗಳನ್ನು ಹಿಡಿದು ಕಿಲೋಮೀಟರ್ ಗಟ್ಟಲೇ ನಡೆದು ಹೋಗಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಪಟ್ಟಣದ ಜನತೆ ಕೆಲಸಕ್ಕೆ ಹೋಗಲಿಕ್ಕೆ ಆಗದೆ ನೀರಿಗಾಗಿ ಪ್ರತಿನಿತ್ಯ ನೀರನ್ನು ತುಂಬುವಂತಹ ಕೆಲಸಗಳಲ್ಲಿ ತೊಡಗುವಂತಾಗಿದೆ,ಇನ್ನು ಆನೇಕಲ್ ಪಟ್ಟಣದಲ್ಲಿ ಕಾವೇರಿ ನೀರು ಸರಬರಾಜು ಆಗುತ್ತಿದೆ ಎಂದು ಹೇಳಿಕೊಳ್ಳುವ ಶಾಸಕರು ಸ್ಥಳೀಯ ಪುರಸಭಾ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಕಾವೇರಿ ನೀರಲ್ಲ ದಿನನಿತ್ಯ ಬಳಸುವಂತಹ ನೀರನ್ನು ಸಹ ಕೂಡಲ್ಲೂ ಸಂಪೂರ್ಣ ವಿಫಲವಾಗಿದ್ದಾರೆ.ಇನ್ನು ಶಾಸಕರು ಅವರ ಸರ್ಕಾರವನ್ನು ಉಳಿಸಿಕೊಳ್ಳಲು ರೆಸಾರ್ಟ್ಗೆ ಹೋಗಿ ಕುಳಿತಿದ್ದಾರೆ ಪಟ್ಟಣದ ಜನತೆಗೆ ಯಾವೊಬ್ಬ ಜನ ನಾಯಕನ್ನು ಸ್ಫಂದಿಸುತ್ತಿಲ್ಲ ಚುನಾವಣೆ ಬಂದಾಗ ಮಾತ್ರ ಟ್ಯಾಂಕರ್ ಗಳನ್ನು ಕಳುಹಿಸಿ ನೀರನ್ನು ನೀಡುವ ಜನಪ್ರತಿನಿಧಿಗಳು ಗೆದ್ದ ನಂತರ ಇತ್ತ ತಲೆಯೂ ಸಹ ಹಾಕೋದಿಲ್ಲ ಅವರನ್ನು ಹುಡುಕಿ ಮನೆ ಬಳಿ ಹೋದ್ರೆ ಪೈಪ್ ಲೈನ್ ಹೊಡೆದಿದೆ ಸರಿ ಪಡಿಸುತ್ತೇವೆಂದು ತಪ್ಪಿಸಿಕೊಳ್ಳುವ ಯತ್ನ ಮಾಡುವ ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *