ಚಳ್ಳಕೆರೆ : ಕ್ರೂಷರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ. ತಾಲ್ಲೂಕಿನ ಲಕ್ಷ್ಮಿಪುರದ ಅಜಿತ್ (23) ಸ್ಥಳದಲ್ಲೆ ಮೃತ ಪಟ್ಟ ಯುವಕ.ಲಕ್ಷ್ಮಿ ಪುರದಿಂದ ಗೊಪನಹಳ್ಳಿ ಕಡೆ ಹೋಗುತ್ತಿದ್ದಾಗ ಹಿರಿಯೂರು ಕಡೆಯಿಂದ ಬಂದ ಕ್ರೂಷರ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕ್ರೂಷರ್ ನಲ್ಲಿ ಇದ್ದವರು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಪಿಎಸ್ಐ ಕೆ ಸತೀಸ್ ನಾಯ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕೇಸ್ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





