ಮಂಡ್ಯ:ಆಧಾರ ಕಾರ್ಡ್ ಮಾಡಸಿಕೊಳ್ಳಲು ಮಧ್ಯರಾತ್ರಿಯೇ ನಾಗರೀಕರು ಮಕ್ಕಳು ಮರಿಗಳೊಂದಿಗೆ ಆಗಮಿಸಿ ಜಾಗರಣೆ ನಡೆಸಿ ರಾತ್ರಿಯಿಡೀ ಬ್ಯಾಂಕ್ ಬಳಿ ಕಾದು ಆಧಾರ ಮಾಡಿಸಲು ಟೋಕನ್ ಪಡೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ದಿನಕ್ಕೆ ಕೇವಲ 20 ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡುತ್ತಿರುವುದರಿಂದ ನೂರಾರು ಜನರು ಆಧಾರ್ ಕಾರ್ಡಿಗೆ ಪರದಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂದೆ ಪ್ರತಿದಿನವೂ ಆಧಾರ್ ಕಾರ್ಡ್ ಗೋಳನ್ನು ಕೇಳಿ ಪರಿಹಾರ ನೀಡುವವರೇ ಇಲ್ಲದಂತಾಗಿದೆ. ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮಾಡಲು ಅನುಕೂಲ ಮಾಡಿಕೊಡಲು ವ್ಯವಸ್ಥೆ ಮಾಡಿಕೊಡುವ ಮೂಲಕ ತಾಲ್ಲೂಕು ಆಡಳಿತವು ಜನಸಾಮಾನ್ಯರಿಗೆ ನೆರವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





