Breaking News

ಕ್ರಿಕೆಟ್ ಬುಕ್ಕಿಗಳಿಗೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು…

ಹುಬ್ಬಳ್ಳಿ: ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಪೊಲೀಸರು ಕೂಡ ಪೂಲ್ ಅಲರ್ಟ್ ಆಗಿದ್ದು, ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ವಿರುದ್ದ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರ ಬಂಧಿಸಿದ್ದು,ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.‌

ನಗರದ ಡಾಕಪ್ಪ ಸರ್ಕಲ್ ನಲ್ಲಿ ಐವರು ಬೆಟ್ಟಿಂಗ್ ನಲ್ಲಿ ತೊಡಗಿದ್ದ ನವೀನ್, ಮಹಮ್ಮದ್,ಪವನ್ ಎಂಬುವವರನ್ನು ಬಂಧಿಸಲಾಗಿದ್ದು,
ಸಂತೋಷ್ ಹಾಗೂ ಗಿರೀಶ್ ಎಂಬುವವರು ಪರಾರಿಯಾಗಿದ್ದಾರೆ.ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಡೆಯುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ‌ ಪೊಲೀಸರು ದಾಳಿ ಮಾಡಿದ್ದು, ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…

ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ …

Leave a Reply

Your email address will not be published. Required fields are marked *