ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪುರಸಭೆಯ ಆಡಳಿತ ಜೆಡಿಎಸ್ ಪಕ್ಷ ಹಿಡಿಯೋದು ಖಚಿತ, ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಬಿಡಲ್ಲ ಎಂದು ಜೆಡಿಎಸ್ ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕೃಷ್ಣರಾಜಪೇಟೆ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸುವ ಕನಸು ಹೊತ್ತಿದ್ದೇವೆ. ಶಾಸಕರಾದ ನಾರಾಯಣಗೌಡರ ನೇತೃತ್ವದಲ್ಲಿ ಪಟ್ಟಣದ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ದುರಾಡಳಿತ ಅಂತ್ಯಗೊಳಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ನಾವು ಕೆ.ಆರ್.ಪೇಟೆ ಪಟ್ಟಣವನ್ನು ಸಿಂಗಾಪುರ್ ಮಾಡಲು ಸಾಧ್ಯವಿಲ್ಲದಿದ್ದರೂ ಚನ್ನರಾಯಪಟ್ಟಣ ಟೌನಿನಂತೆ ಮಾದರಿಯಾಗಿ ಅಭಿವೃದ್ಧಿ ಮಾಡ್ತೀವಿ. ನಮ್ಮ ಸದಸ್ಯರ ತಂಟೆಗೆ ಕಾಂಗ್ರೆಸ್ ಬಂದು ಕುದುರೆ ವ್ಯಾಪಾರಕ್ಕೆ ಕೈಹಾಕಿದರೆ ಕಾನೂನು ಹೋರಾಟ ನಡೆಸ್ತೀವಿ. ಕಳೆದ 30 ವರ್ಷಗಳಿಂದ ಪುರಸಭೆಯಲ್ಲಿ ಕಾಂಗ್ರೆಸ್ ಪಟ್ಟಣದ ಅಭಿವೃದ್ಧಿ ಮರೆತು ದುರಾಡಳಿತ ನಡೆಸಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ನಮಗೆ ಅಭಿವೃದ್ಧಿಗೆ ಸಹಕರಿಸಲಿ. ತಪ್ಪು ಮಾಡಿದಾಗ ತಿದ್ದಿ ಮಾರ್ಗದರ್ಶನ ಮಾಡಲಿ ಎಂದು ಸಂತೋಷ್ ಮನವಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





