ಯಾದಗಿರಿ: ಗ್ರಾಮೀಣ ಭಾಗದ ಮಧ್ಯಮ ಮತ್ತು ಬಡಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ನೀಡಿದ ಅನೇಕ ವಿಮೆ ಯೋಜನೆಗಳ ಲಾಭವನ್ನು ಸ್ಟೇಟ್ ಬ್ಯಾಂಕ್ ಅಫ್ ಇಂಡಿಯ ಬ್ಯಾಂಕಿನ ಮೂಲಕ ಪಡೆಯುವಂತೆ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಅಧಿಕಾರಿ ರಾಮಕೃಷ್ಣ ಶೆಣೈ ತಿಳಿಸಿದರು.
ಶುಕ್ರವಾರದಂದು ಕಾಕಲವಾರದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಹಕರ ಸಭೆ ಮತ್ತು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಈ ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕಿನ ವ್ಯವಹಾರ ಮಹತ್ವದ್ದಾಗಿದ್ದು, ಬ್ಯಾಂಕ್ ವ್ಯವಹಾರವು ಉಳ್ಳವರಿಗೆ ಮಾತ್ರ ಎಂಬ ಹಣೆಪಟ್ಟಿಯನ್ನು ಕಳಚುವ ನಿಟ್ಟಿನಲ್ಲಿ ಪ್ರತಿ ಜನ ಸಾಮಾನ್ಯ ಬ್ಯಾಂಕ್ ಮೂಲಕ ವ್ಯವಹಾರ ಮಾಡುವಂತೆ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ನೀಡುತ್ತಿದ್ದೇವೆ.ತಮ್ಮ ಹಣಕಾಸಿನ ವ್ಯವಹಾರದ ಜೊತೆಗೆ ಬೆಳೆ ವಿಮೆ,ವೈಯಕ್ತಿಕ ವಿಮೆ,ಕುಟುಂಬ ವಿಮೆಗಳನ್ನು ಮಾಡಿಸಿ ಸರಕಾರದ ಸೌಲಭ್ಯ ಪಡೆಯುವಂತೆ ತಿಳಿಸಿದರು.
ಲೀಡ್ ಬ್ಯಾಂಕ್ ನ ಆರ್ಥಿಕ ಸಾಕ್ಷರತಾ ಸಲಹೆಗಾರ ದೇವಿಂದ್ರಪ್ಪ ಮಾಮನಿ ಮಾತನಾಡಿ, ಈಗ ಬ್ಯಾಂಕ್ನ ಸೇವೆ ಮತ್ತು ಸೌಲಭ್ಯಗಳನ್ನು ಸರಳೀಕರಣಗೊಳಿಸಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಯಾವುದೇ ಬ್ಯಾಂಕ್ ನಲ್ಲಿ ಖಾತೆಯನ್ನು ಮಾಡಿಸಬೇಕು.ಅದನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು.ಅದನ್ನೇ ಎಲ್ಲಾ ಯೋಜನೆ ಮತ್ತು ಸೌಲಭ್ಯಗಳಿಗೆ ಜೋಡಿಸಬೇಕು. ಇದರಿಂದ ಆರ್ಥಿಕ ಸಾಕ್ಷರತೆ , ಸಾಮಾಜಿಕ ಮತ್ತು ಕುಟುಂಬ ಭದ್ರತೆಯ ಬಗ್ಗೆ ಅರಿವು ಮೂಡುತ್ತದೆ. ಅಸಂಘಟಿತ ಕಾರ್ಮಿಕರ ವಲಯ,ಕೃಷಿಕರಿಗೆ,ಎಲ್ಲಾ ವಯೋಮಾನದವರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೂಪಿತ ಯೋಜನೆಗಳ ಲಾಭ ಪಡೆಯುವಂತೆ ತಿಳಿಸಿದರು.
ಅದರಂತೆ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಜನಧನ ಯೋಜನೆ ಅಡಿಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಯಾವುದೇ ಠೇವಣಿ ಇಲ್ಲದೆ ಶೂನ್ಯ ಖಾತೆ ತೆರೆಯುವಂತೆ ತಿಳಿಸಿದ ಅವರು, ಗ್ರಾಮೀಣ ಭಾಗದ ಜನತೆಗಾಗಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಕೇವಲ ೧೨ ರೂಪಾಯಿಗಳ ಕಂತು ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ೩೩೦ ರೂಪಾಯಿಗಳ ಕಂತುಗಳ ವಿಮೆ ಮಾಡಿಸಿ ಜೀವಮಾನದ ವರೆಗೆ ಅನೇಕ ಲಾಭಗಳ ಬಗ್ಗೆ ತಿಳಿಸಿ
ಬ್ಯಾಂಕಿನ ಎಲ್ಲಾ ಸೇವೆಗಳನ್ನು ಗ್ರಾಹರ ಸೇವಾ ಕೇಂದ್ರಗಳ ಮೂಲಕವೂ ಪಡೆಯಬಹುದು ಎಂದು ಹೇಳಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಗಳಾದ ದಿನೇಶ LHO,,ರವಿಗೌಡ FIAO,ತೋಬಲ್ FIRBO ,ತೌಫೀಕ. CH, ಅರ್ನಬ್ HO , ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಶರಣಪ್ಪ ಮೈಲಾರಿ, ಗ್ರಾಹಕರ ಸೇವಾ ಪ್ರತಿನಿಧಿಗಳಾದ ರವೀಂದ್ರರೆಡ್ಡಿ,ಸದಾಶಿವರೆಡ್ಡಿ,ಪ್ರಕಾಶ ಮಾಮಿಡಿ,ವೆಂಕಟರೆಡ್ಡಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





