Breaking News

ಚರ್ಮ ಗಂಟಿನಿಂದ ಸಾವುನಪ್ಪಿದ ರೈತರ ನೆರವು : ಸಿಎಂ


ಹಾವೇರಿ: ಕೆಲ ಸಮಯದಿಂದ ಚರ್ಮ ಗಂಟು(ಲಂಪಿ ಸ್ಕಿನ್‌) ಕಾಯಿಲೆಯಿಂದ ಸಂಭವಿಸುತ್ತಿರುವ ಜಾನುವಾರುಗಳ ಸಾಲು ಸಾಲು ಸಾವಿನಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ರೈತರ ನೆರವಿಗೆ ಇದೀಗ ಸರ್ಕಾರ ಧಾವಿಸಿದೆ. ಚರ್ಮಗಂಟು ಕಾಯಿಲೆಯಿಂದ ಸಾವಿಗೀಡಾಗುವ ಹಸುವಿಗೆ 20 ಸಾವಿರ, ಎತ್ತಿಗೆ 30 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಮೆಗಾ ಡೈರಿ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಚರ್ಮ ಗಂಟು ಬಾಧೆಗೆ ತುತ್ತಾದ ಜಾನುವಾರುಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ. ಗಂಟು ರೋಗದಿಂದ ರಾಸುಗಳ ಜೀವಹಾನಿಯಾದಾಗ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *