ಮಂಡ್ಯ; ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನ ತಮ್ಮ ಹುಟ್ಟೂರು ಬೂಕನಕೆರೆ ಮತ್ತು ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಯಿರುವ ಕಾಪನಹಳ್ಳಿ ಗವಿಮಠ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದರು. ಬೂಕನಕೆರೆ ಗ್ರಾಮ ದೇವತೆ ಶ್ರೀ ಗೋಗಾಲಮ್ಮದೇವಿ ಮತ್ತು ಮನೆ ದೇವರು ಶ್ರೀಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಯಡಿಯೂರಪ್ಪ ಅವರಿಗೆ ಶಾಸಕ ಬಸವರಾಜಬೊಮ್ಮಾಯಿ, ರೈತಮುಖಂಡ ನಂಜುಂಡೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಪುತ್ರ ಸಂಸದ ಬಿ.ವೈ.ವಿಜಯೇಂದ್ರ, ಮುಖಂಡ ಚನ್ನರಾಯಪಟ್ಟಣ ಶಿವನಂಜೇಗೌಡ ಸಾಥ್ ನೀಡಿದರು. ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನೀಡಲಾಯಿತು. ಪೋಲಿಸ್ ಬಿಗಿ ಬಂದೋಬಸ್ತ್ ನಿಂದಾಗಿ ಗವಿಮಠದೊಳಗೆ ಹೋಗಲು ಜಿಲ್ಲಾಧಿಕಾರಿ, ತಹಶೀಲ್ದಾರ್ ಶಿವಮೂರ್ತಿಗದ್ದುಗೆಯ ಒಳಹೋಗಲಾಗದೇ ಹೊರಗೆ ಕಾದು ನಿಂತರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಸದನದಲ್ಲಿ ವಿಶ್ವಾಸ ಮತವನ್ನು ಸಾಭೀತುಪಡಿಸಿ ಆರ್ಥಿಕ ಆಯವ್ಯಯ ಬಿಲ್ ಮಂಡಿಸಿ ಒಪ್ಪಿಗೆ ಪಡೆಯುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಹುಟ್ಟೂರಿಗೆ ಬಂದು ಮನೆದೇವರ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿರುವುದು ನನ್ನಲ್ಲಿ ನವಚೈತನ್ಯವನ್ನು ಮೂಡಿಸಿದೆ.ಬಾಲ್ಯ ಮತ್ತು ತಂದೆಯವರ ನೆನಪುಗಳು ನನ್ನನ್ನು ಕ್ಷಣ ಕಾಲ ಬಾಲ್ಯಕ್ಕೆ ಕರೆದೊಯ್ದವು ಎಂದು ಭಾವುಕರಾದರು…ಈ ವೇಳೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





