ಮಂಡ್ಯ: ಸ್ವಿಫ್ಟ್ ಕಾರಿಗೆ ಕೆ. ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಎರಡು ಮಕ್ಕಳು ಸೇರಿ ಮೂರು ಸಾವನ್ನಪ್ಪಿ ಒಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದೆ. ಸ್ವಿಫ್ಟ್ ಕಾರು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದು ಈ ರಸ್ತೆಯಿಂದ ಆ ರಸ್ತೆಗೆ ಜಂಬಾಗಿ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕಾರಿನಲ್ಲಿ ಬರುತ್ತಿದ್ದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಅಪಘಾತದಿಂದ ಬೆಂಗಳೂರು-ಮೈಸೂರು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.ಸ್ಥಳಕ್ಕೆ ಸಿಪಿಐ ಮಹೇಶ್ ಹಾಗೂ ಸಂಚಾರಿ ಪಿಎಸ್ಐ ಮೋಹನ್ ಡಿ. ಪಟೇಲ್ ಭೇಟಿನೀಡಿ ಅಪಘಾತ ಸ್ಥಳವನ್ನು ಸಂಪೂರ್ಣ ಸಂಚಾರವನ್ನು ಸುಗಮಗೊಳಿಸಿ ದ್ದಾರೆ ಅಪಘಾತಕ್ಕೀಡಾದ ಕಾರು ಹಾಗೂ ಸಾರಿಗೆ ಬಸ ಡ್ರೈವರ್ ಕಾಣೆಯಾಗಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





