ಮೈಸೂರು: ನಟ ದರ್ಶನ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ತಮ್ಮ ನೆಚ್ಚಿನ ನಟನನ್ನ ನೋಡುವ ತವಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಸ್ಪತ್ರೆ ಬಳಿ ಅಭಿಮಾನಿಗಳು ಬರದಂತೆ ದರ್ಶನ್ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಇಂದು ಮಹಿಳಾ ಪೌರಕಾರ್ಮಿಕರು ದರ್ಶನ್ ನೋಡಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಆಗಮಿಸಿದ್ದು, ಸೆಕ್ಯೂರಿಟಿಗೆ ಒಳ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನಮಗೆ ವಿಚಾರ ಗೊತ್ತಾಯಿತು. ವಿಚಾರ ತಿಳಿದ ಮೇಲಿಂದ ಊಟವೇ ಸೇರುತ್ತಿಲ್ಲ. ರಾತ್ರಿಯೆಲ್ಲಾ ನಿದ್ರೆ ಬಂದಿಲ್ಲ. ದಯವಿಟ್ಟು ನಮಗೆ ದರ್ಶನ್ ನೋಡಲು ಅವಕಾಶ ಮಾಡಿಕೊಡಿ ಎಂದು ಮಹಿಳೆಯರು ಮನವಿ ಮಾಡಿದರು. ಆದರೆ ಒಳ ಹೋಗಲು ಸೆಕ್ಯೂರಿಟಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಿರಾಸೆಯಿಂದ ಅವರೆಲ್ಲಾ ವಾಪಾಸ್ ಆದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





