ಬೆಳಗಾವಿ: ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವದು ಗೊತ್ತು. ಮೈತ್ರಿ ಸರ್ಕಾರ ಅಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಪ್ರಭಾವ ಇದ್ದೇ ಇದೆ ಎಂದು ಪ್ರಭಾಕರ ಕೋರೆ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗಾವಿ ತನ್ನದೇಯಾದ ಮಹತ್ವ ಹೊಂದಿದೆ. ಇಲ್ಲಿನ ರಾಜಕಾರಣಿಗಳಿಗೆ ಸರಕಾರ ರಚಿಸುವುದುಗೊತ್ತು ಉರಳಿಸುವುದು ಗೊತ್ತು ಎಂದರು. ಇನ್ನು ಬಿಜೆಪಿ ಎನ್ನುವುದು ಮಹಾ ಸಾಗರ ಇದ್ದಹಾಗೆ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತದೆ. ಇನ್ನು ಬೆಳಗಾವಿಯಲ್ಲಿ ಸಿಎಂ ಆಗುವಂತವರೂ ಇದ್ದಾರೆ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ.. ಡಿಸಿಎಂ ಪಟ್ಟಕ್ಕೆ ಆಸೆ ಪಡುವ ರಾಜಕಾರಣಿಗಳು ಇಲ್ಲಿಲ್ಲ.ಅವಕಾಶ ಸಿಕ್ಕಾಗ ಇಲ್ಲಿನವರು ಸಿಎಂ ಹುದ್ದೆಗೆ ಎರುತ್ತಾರೆಯೇ ಹೊರತು ನಮಗೆ ಡಿಸಿಎಂ ಬೇಡ ಎಂದರು.ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ.. ಜಿಲ್ಲೆಗೆ ನಾಲ್ಕು ಏಕೆ ಇನ್ನೊಂದು ಸಚಿವ ಸ್ಥಾನ ಕೊಟ್ರೂ ನಮಗೂ ಖುಷಿ ಇದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





