ಮಂಡ್ಯ: ಸ್ಪೀಕರ್ ರಮೇಶ್ ಕುಮಾರ್ ಮಾಜಿಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚಿತಾವಣೆಗೆ ಒಳಗಾಗಿ ದುರುದ್ಧೇಶದಿಂದ ಅನರ್ಹತೆಯ ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ಕೃಷ್ಣ ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಮತ್ತು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಕಿಡಿ ಕಾರಿದರು. ಅನರ್ಹಗೊಂಡಿರುವ ಶಾಸಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ನ್ಯಾಯ ಪಡೆಯಬಹುದು ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅಭಿಮತ ನೀಡಿದ್ದಾರೆ.ಇಂದಿನ ರಾಜಕೀಯ ಸಂದಿಗ್ಧತೆಗೆ, ಮೈತ್ರಿ ಸರ್ಕಾರದ ಪತನಕ್ಕೆ ಸಿದ್ಧರಾಮಯ್ಯ ಮತ್ತು ದೇವೇಗೌಡರೇ ನೇರ ಕಾರಣರಾಗಿದ್ದಾರೆ.ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರೇ ಸದನ ದಿಕ್ಕುತಪ್ಪಿದೆ, ಅಡ್ಡದಾರಿ ಹಿಡಿದು ಶಾಸಕಾಂಗ ನಾಯಕರಾಗಿರುವ ಕುಮಾರಸ್ವಾಮಿ ಅವರನ್ನು ಅನರ್ಹಗೊಳಿಸುವಂತೆ ತಿಳಿಸಿದ್ದರು, ಆದರೆ ನಾನು ನನ್ನ ಮನಸಾಕ್ಷಿಗೆ ಅನುಗುಣವಾಗಿ ತೀರ್ಪು ನೀಡಿದೆ.ಇಂದು ಚುನಾವಣೆ ನಡೆದರೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಜೆಡಿಎಸ್ 20, ಕಾಂಗ್ರೆಸ್ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ.ಸಮ್ಮಿಶ್ರ ಸರ್ಕಾರದ ರಚನೆಯ ಸಂದರ್ಭದಲ್ಲಿ ಎರಡೂವರೆ ವರ್ಷ, ಎರಡೂವರೆ ವರ್ಷ ಸಮನಾಗಿ ಹಂಚಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ಆಡಳಿತ ನಡೆಸಿದ್ದರೆ ಇಂದಿನ ಸಂದಿಗ್ಧ ಪರಿಸ್ಥಿತಿಯು ನಿರ್ಮಾಣವಾಗುತ್ತಿರಲಿಲ್ಲ.ಇಂದಿನ ದಿನಮಾನದಲ್ಲಿ ಪ್ರಜಾಪ್ರಭುತ್ವ ದಿಕ್ಕುತಪ್ಪುತ್ತಿದೆ. ಅಧ್ಯಕ್ಷೀಯ ಮಾದರಿಯ ಆಡಳಿತವೇ ನಮ್ಮ ರಾಷ್ಟ್ರಕ್ಕೆ ಸೂಕ್ತ.ಎಲ್ಲಾ ರಾಜಕೀಯ ಪಕ್ಷಗಳೂ ಹಣವಿದ್ದವರಿಗೆ ಮಣೆ ಹಾಕಿ ಕ್ರಿಮಿನಲ್ ಗಳನ್ನು ಪೋಷಿಸುತ್ತಿದ್ದಾರೆ.ದೇವೇಗೌಡ ಸಿದ್ದರಾಮಯ್ಯ ಇಬ್ಬರು ಸ್ವಾರ್ಥ ರಾಜಕಾರಣಿಗಳು ಒಂದೇ ನಾಣ್ಯದ ಎರಡು ಮುಖಗಳು ಮಾಜಿ ಸ್ಪೀಕರ್ ಕೃಷ್ಣ ಕಿಡಿ ಕಾರಿದರು.ಅಲ್ಲದೆ ದೋಸ್ತಿಗಳು ಜನತೆ ನೀಡಿದ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡಿದ್ದರೆ ಜನರ ವಿಶ್ವಾಸ ಗಳಿಸಬಹುದಿತ್ತು. ಇಂದು ಮೈತ್ರಿ ಸರ್ಕಾರ ಪಥನವಾಗಿದ ರೀತಿಯನ್ನು ನೋಡಿದರೆ ಮತ್ತೆ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ತಲೆಯಿತ್ತಿ ನಿಲ್ಲುವುದೂ ಕೂಡ ಕಷ್ಠವಾಗಲಿದೆ.ಸರ್ಕಾರದ ಮೇಲೆ ಜನತೆ ಇಟ್ಟಿದ್ದ ಭರವಸೆಗಳು ಆಕಾಂಕ್ಷೆಗಳು ನುಚ್ಚು ನೂರಾಗಿವೆ ಎಂದು ಕೃಷ್ಣ ವಿಷಾದ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





