ಕೋಲಾರ : ಕೋಲಾರದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ ಕೆರೆ ಅಂಗಳವನ್ನು ಶನಿವಾರ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕೋಲಾರ ತಾಲೂಕಿನ ಹೋಳೂರು ಗ್ರಾಮದ ಹೊಸಕೆರೆ ಅಂಗಳವನ್ನು ತೆರವು ಮಾಡಲಾಗಿದೆ. ಪೊಲೀಸ್ ಬೆಂಗಾವಲಿನಲ್ಲಿ ಒತ್ತುವರಿಯನ್ನು ತೆರವು ಮಾಡಲಾಗಿದೆ.ಕೋಲಾರ ತಾಲೂಕಿನ ಹೋಳೂರು ಗ್ರಾಮದಲ್ಲಿ ಹೊಸದಾಗಿ ಕೆರೆ ಮಾಡಬೇಕೆಂದು 40 ವರ್ಷಗಳ ಹಿಂದೆ ಸರ್ಕಾರ ಜಾಗವನ್ನು ಗುರುತಿಸಿತ್ತು. ಕೆರೆ ಅಭಿವೃದ್ದಿಗೊಳಿಸುವ ಜಾಗದಲ್ಲಿನ 28 ಎಕರೆ ಪ್ರದೇಶದಲ್ಲಿ ಅನುಭವದಲ್ಲಿದ್ದ ಇಪ್ಪತ್ತೊಂದು ಮಂದಿ ಕೃಷಿಕರಿಗೆ ಸರ್ಕಾರವು ಪರಿಹಾರವನ್ನು ಕೊಟ್ಟು ಜಾಗವನ್ನು ವಶಕ್ಕೆ ಪಡೆದುಕೊಂಡಿತ್ತು. ಆದ್ರೆ, ಸ್ವಾಧೀನ ಮಾಡಿಕೊಂಡಿದ್ದ ಜಮೀನಿನಲ್ಲಿ ಸರ್ಕಾರವು ಕೆರೆಯನ್ನು ಅಭಿವೃದ್ದಿ ಮಾಡುವ ಕೆಲಸವನ್ನು ಮರೆತೇ ಬಿಟ್ಟಿತ್ತು. ಕಾಲಾ ನಂತ್ರ ಅಲ್ಲಿದ್ದ ರೈತ್ರು ಅದೇ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಮುಂದುವರೆಸಿದ್ದರು. ಈ ಬಗ್ಗೆ ಸ್ಥಳೀಯ ರೈತ್ರೊಬ್ಬರು ಭೂಕಬಳಿಕೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕೆರೆ ಜಮೀನು ಒತ್ತುವರಿ ಆಗಿರುವುದನ್ನು ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿತು. ಈ ಕುರಿತು ಕ್ರಮ ಜರುಗಿಸಿದ ಕಂದಾಯ ಇಲಾಖೆಯು ಇಂದು ಪೊಲೀಸ್ ಬೆಂಗಾವಲಿನಲ್ಲಿ ಕೆರೆಯ ಅಂಗಳದ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆಯನ್ನು ಕೊಟ್ಟಿತು. ಜಮೀನು ಒತ್ತುವರಿ ತೆರವು ಕಾರ್ಯಾಚರಣೆಯು ಎರಡು ದಿನಗಳ ಕಾಲ ಮುಂದುವರೆಯಲಿದೆ ಅಂತ ಮೂಲಗಳು ಹೇಳಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





