Breaking News

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ನ ಗಂಟು ಕಟ್ಟಿಸಿ ಗಡಿ ಪಾರು ಮಾಡಿದ ಪೊಲೀಸರು….

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟ ತೆರೆಯಲಾಗಿದ್ದ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ಅಲ್ತಾಪ ತಂದೆ ಮಹಮ್ಮದಲಿ ಬೇಪಾರಿ ನದಾಪ್ ಎಂಬಾತನನ್ನು ದಿನಾಂಕ 19.10.2023 ರಿಂದ 06 ತಿಂಗಳ ಅವಧಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ.

ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ, ಬಡ್ಡಿ ವ್ಯವಹಾರ,ಅಮಾಯಕ ಜನರಿಗೆ ಜೀವ ಬೆದರಿಕೆ ಹಾಕುವುದು, ಕೊಲೆ ಯತ್ನ ಇಂತಹ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ. ಕೆಲವು ಪ್ರಕಾರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದರಿಂದ ತನ್ನ ಅಪರಾಧಿಕ ಪ್ರವೃತ್ತಿಯನ್ನು ಮುಂದುವರೆಸುತ್ತ ಕಾನೂನಿನ ಭಯವಿಲ್ಲದೆ ಮಾರಕಸ್ತ್ರ ಇಟ್ಟುಕೊಂಡು ತಿರುಗಾಡುವುದು, ಸಾರ್ವಜನಿಕರಿಗೆ ಬೆದರಿಸುವುದು, ಹಾಗೂ ಅಕ್ರಮ ಚಟುವಟಿಕೆಯನ್ನು ನಡೆಸುತ್ತ ಸಮಾಜದ ಸ್ವಾಸ್ತ್ಯ ಹಾಳು ಮಾಡಿ ಅಭದ್ರತೆ ವಾತಾವರಣ ಉಂಟು ಮಾಡುತ್ತಿರುವುದು ಕಂಡುಬಂದಿರುತ್ತದೆ.

ಈ ಹಿನ್ನಲೆಯಲ್ಲಿ ಸದರಿ ರೌಡಿಶೀಟರ್ ಗೆ ಸೂಕ್ತ ಶಿಕ್ಷೆ ನೀಡುವ ನಿಟ್ಟಿನಲ್ಲಿ ಗಡಿಪಾರು ಮಾಡಲಾಗಿದ್ದು. ಇಂತಹ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿ ಸಾರ್ವಜನಿಕ ಶಾಂತಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಇತರರಿಗೂ ಕೊಡ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

Share News

About Shaikh BigTv

Check Also

ಕುಚಿಕು ಗೆಳೆಯನನ್ನೇ ಬರ್ಬರವಾಗಿ ಕೊಂದು ಆತನ ಮನೆಯಲ್ಲೇ ಉಪ್ಪಿಟ್ಟು ತಿಂದ ಪಾಪಿ!

ಗದಗ: ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಕಡಲೆ ಮಾರಾಟದ ಹಣದ ವಿಚಾರವಾಗಿ ಗೆಳೆಯನನ್ನೇ ಕೊಡಲಿಯಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ …

Leave a Reply

Your email address will not be published. Required fields are marked *