Breaking News

ಮಾಜಿ ಕಾರ್ಪೋರೇಟರ್‌ ಅಂಬಿಕಾ ಅವರ ಮನೆಯಲ್ಲಿ 42 ಕೋಟಿ ರೂ. ಹಣ….

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಏಜೆಂಟ್‌ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್‌ ಅಂಬಿಕಾ ಅವರ ಮನೆಯ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು 42 ಕೋಟಿ ರೂ. ಒಂದೇ ಕಡೆ ಸಿಕ್ಕಿದೆ. ಈ ಹಣದ ಮೂಲವನ್ನು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ.

ಮಾಜಿ ಕಾರ್ಪೋರೇಟರ್‌ ಅಂಬಿಕಾ ಹಾಗೂ ಅಶ್ವತ್ಥಮ್ಮ ಅವರ ಮನೆಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಹಣ ಮೂಲ ಎಲ್ಲಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಐಟಿ ರೇಡ್ ನಲ್ಲಿ ಕಾಂಗ್ರೆಸ್ ಏಜೆಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ರೂ. ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ ಎಂದು ಹೇಳಿದರು.

Share News

About admin

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *