ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಹೋಬಳಿಯ ಎಲ್ಲಾ ಪಲಾನುಭಾವಿಗಳಿಗೆ ಬಾಂಡ್ ವಿತರಿಸುವುದಾಗಿ ಎಲ್ಲರೂ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ 9 ಗಂಟೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿದಿದ್ದಾರೆ.ಆದರೆ ಜಿಡಿ ಜಿಡಿ ಮಳೆಯಲ್ಲಿಯೋ ಮಕ್ಕಳೊಂದಿಗೆ ಬಂದಿರುವ ತಾಯಿ ಮಕ್ಕಳಿಗೆ ಸಕಾಲಕ್ಕೆ ಅಧಿಕಾರಿಗಳು ಬಂದು ಭಾಗ್ಯಲಕ್ಷ ಬಾಂಡ್ ವಿತ್ತರಿಸದ ಕಾರಣ ಆಕ್ರೋಷ ವ್ಯೆಕ್ತಪಡಿಸಿದರು.ಅದಿಕಾರಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಬೇಜವ್ದಾರಿ ಉತ್ತರ ನೀಡಿ ನೀವೇನು ನಮ್ಮಗೆ ಸಂಬಳ ಕೊಡುವುದಿಲ್ಲ ಬರುವವರೆಗೂ ಕಾಯಿರಿ ಇಲ್ಲವಾದರೆ ನೀವು ಏನಾದ್ರು ಮಾಡಿಕೊಳ್ಳಿ ಎಂದು ಉಡಾಪೆ ಉತ್ತರಿಸಿದರು ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತ ಪಡಿಸಿದರು.ಈ ಸಮಯದಲ್ಲಿ ಸುಮಾರು ಇನ್ನೂರು ಮಕ್ಕಳು ಮಹಿಳೆಯರು ಇದ್ದರು ಇಂತಹ ಬೇಜವ್ದಾರಿ ಆದಿಕಾರಿಗಳನಗನು ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





