Breaking News

ವೀರಶೈವಲಿಂಗಾಯತ ಎನ್ನುವುದು ಒಂದು ಜಾತಿಯಲ್ಲ, ಅದು ಧಾರ್ಮಿಕ ಸಂಸ್ಕೃತಿ: ವಿರೂಪಾಕ್ಷ ರಾಜಯೋಗಿಗಳ ಅಭಿಮತ.

ಮಂಡ್ಯ: ಜಿಲ್ಲೆಯ ಶ್ರೀ ಚನ್ನಬಸವೇಶ್ವರ ಕಲ್ಲುಮಠದ ಶ್ರೀ ಡಾ.ವಿರೂಪಾಕ್ಷರಾಜಯೋಗಿಗಳು ವೀರಶೈವ ಲಿಂಗಾಯತರತ್ನ ಸಂಶೋಧನಾ ಕೃತಿಯನ್ನು ಹೊರತಂದಿದ್ದು ವೀರಶೈವ ಲಿಂಗಾಯತ ಒಂದೇ ಧರ್ಮವಾಗಿದ್ದು ಧರ್ಮವಿಭಜನೆಗೆ ಮುಂದಾಗಿರುವ ದ್ರೋಹಿಗಳು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತವಾಗಿ ಒಂದೇ ಧರ್ಮವೆಂದು ಸಾಬೀತು ಪಡಿಸುತ್ತೇನೆ ಎಂದು ಶ್ರೀವಿರೂಪಾಕ್ಷ ರಾಜಯೋಗಿಗಳು ಸವಾಲು ಹಾಕಿದ್ದಾರೆ. ವೀರಶೈವ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿರುವ ರಾಜಯೋಗಿಗಳು ಮಾಜಿಸಚಿವ ಎಂ.ಬಿ.ಪಾಟೀಲ್ ಧರ್ಮದ್ರೋಹಿಯಾಗಿದ್ದಾರೆ. ವೀರಶೈವ ಧರ್ಮವನ್ನು ವೀರಶೈವ ಲಿಂಗಾಯತ ಎಂದು ಮತಗಳ ಆಸೆಗಾಗಿ ಧರ್ಮ ಒಡೆದು ವಿಭಜನೆ ಮಾಡಿದ ತಪ್ಪಿಗೆ ತಕ್ಕಶಾಸ್ತಿ ಅನುಭವಿಸಿದ್ದಾರೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು… ವೀರಶೈವ ಲಿಂಗಾಯತ ಎನ್ನುವುದು ಒಂದು ಸಂಸ್ಕೃತಿಯಾಗಿದ್ದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಸದ್ಧರ್ಮ ಬಂಧುಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ವೀರಶೈವಲಿಂಗಾಯತರು ನಾವು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ವಿರೂಪಾಕ್ಷ ರಾಜಯೋಗಿಗಳು ಹೇಳಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *