ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್..!
ಗುರುಮಠಕಲ್ ಪೊಲೀಸ್ ಠಾಣೆಯ ಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಜ್ಯದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ‘ಬಿ-ರಿಪೋರ್ಟ್’ ಸಲ್ಲಿಸಲು 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, 1 ಲಕ್ಷ ರೂ. ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು…
ಇದೀಗ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿದೆ…

ಈ ಘಟನೆ ಜನರಲ್ಲಿ ಒಂದು ದೊಡ್ಡ ಪ್ರಶ್ನೆ ಎಬ್ಬಿಸಿದೆ — ಇಂತಹ ಅಧಿಕಾರಿಗಳು ಇನ್ನೂ ಎಷ್ಟು ಮಂದಿ ವ್ಯವಸ್ಥೆಯೊಳಗಿದ್ದಾರೆ..?
ಹುಬ್ಬಳ್ಳಿ-ಧಾರವಾಡದಲ್ಲೂ ದಿನನಿತ್ಯ ಜನರು ಕೆಲವು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಿರುಕುಳ, ಹಣ ವಸೂಲಿ, ದೌರ್ಜನ್ಯ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಕೆಲ ನಿಷ್ಠಾವಂತ ಅಧಿಕಾರಿಗಳ ಗೌರವವನ್ನೇ ಇಂತಹ ಭ್ರಷ್ಟರು ಹಾಳು ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ಜನರಲ್ಲಿ ಕೇಳಿಬರುತ್ತಿದೆ…
ಲೋಕಾಯುಕ್ತ ಅಧಿಕಾರಿಗಳೇ… ಗುರುಮಠಕಲ್‌ನಲ್ಲಿ ಮಾಡಿದಂತೆ, ಹುಬ್ಬಳ್ಳಿ-ಧಾರವಾಡದ ಮೇಲೂ ಒಂದು ಕಣ್ಣಿಟ್ಟರೆ ಜನರಿಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಜನರದ್ದು…
bigtvnews | Hubli Dharwad News | Kannada News | Karnataka News Hubli News | News In Hubli | Local news

