ಚಿತ್ರದುರ್ಗ: ನಿವೇಶನ ಕೊಡಿಸುವುದಾಗಿ ಹೇಳಿ ಪೊಲೀಸರು ಸೇರಿದಂತೆ ಸುಮಾರು 40ಕ್ಕೂ ಜನರಿಗೆ ವಂಚನೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಚಿತ್ರದುರ್ಗ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.ನಗರದ ಬಿ.ಎಲ್.ಗೌಡ ಬಡಾವಣೆಯ ಸಿದ್ದೇಶ್ ಬಂಧಿತ ಆರೋಪಿ. ಈತ ನಗರದ ಡಿಎಆರ್ ಪೊಲೀಸರು ಸೇರಿದಂತೆ ಸಾರ್ವಜನಿಕರಿಂದ ಹಣ ಪಡೆದು ಕಡಿಮೆ ದರದಲ್ಲಿ ಹಲವೆಡೆ ಬಡಾವಣೆ ನಿರ್ಮಿಸುತ್ತಿರುವುದಾಗಿ ನಿವೇಶನ ಕೊಡಿಸುವುದಾಗಿ ಹೇಳಿ 2014ರಿಂದ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ನಂತರ ಪರಾರಿಯಾಗಿದ್ದ.ಸತೀಶ್ ಎಂಬುವವರು ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿ ಸಿದ್ದೇಶನನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





