ಧಾರವಾಡ: ಕಬ್ಬಿನ ಹೊಲದಲ್ಲಿ ಲಾರಿಗೆ ಬೆಂಕಿ ತಗುಲಿ ಲಾರಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ದ್ಯಾಮಣ್ಣ ಗುಡಿಗಾಳ ಎನ್ನುವವರ ಜಮೀನಿನಲ್ಲಿ ಸಂಭವಿಸಿದ್ದು, ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಲಾರಿ ಸ್ಟಾರ್ಟ್ ಮಾಡುವಾಗ ಬೆಂಕಿಯ ಕಿಡಿ ಕೆಳಗೆ ಬಿದ್ದಿದೆ. ಕಿಡಿ ಕಬ್ಬಿನ ಹೊಲಕ್ಕೆ ತಗುಲಿದೆ. ಬಳಿಕ ಬೆಂಕಿ ಲಾರಿಗೂ ತಗುಲಿ ಧಗಧಗನೆ ಉರಿದಿದೆ. ಬೆಂಕಿ ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿ ಸುಟ್ಟು ಕರಕಲಾಗಿದೆ.
ಬೆಂಕಿ ಪಕ್ಕದ ಮೂರು ಎಕರೆಯಲ್ಲಿದ್ದ ಕಬ್ಬು ಬೆಳೆಗೆ ತಗುಲಿದ ಪರಿಣಾಮ ಕಬ್ಬು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

