Breaking News

ಕುಂದಗೋಳ ತಾಲೂಕಿನಾದ್ಯಂತ ಒಂದೇ ದಿನ 15ಕ್ಕೂ ಹೆಚ್ಚು ಮನೆ ಕುಸಿತ

ಕುಂದಗೋಳ: ತಾಲೂಕಿನಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಮನೆಗಳು ಒಂದೊಂದೇ ಕುಸಿಯುತ್ತಿದ್ದು, ಕುಂದಗೋಳ ತಾಲ್ಲೂಕಿನ ಯರೇಬೂದಿಹಾಳ, ಚಿಕ್ಕನೆರ್ತಿ ಸೇರಿದಂತೆ ಹಲವಾರು ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮನೆಗಳು ಒಂದೇ ದಿನ ಬಿದ್ದಿವೆ. ಹಾಗೆಯೇ ಚಿಕ್ಕನರ್ತಿ ಗ್ರಾಮದಲ್ಲಿ ಮಳೆರಾಯನ ಅಟ್ಟಹಾಸಕ್ಕೆ ಅಲ್ಲಾಸಾಬ್ ನಧಾಪ್, ಸುಭಾಸ್ ಬಾರಕೇರ, ಶಶಿಧರ ಮಡಿವಾಳರ, ಕಲ್ಲಪ್ಪ ಮುಸುಂಡಿ , ಶೇಖಪ್ಪ ಪಾಟೀಲ್, ರಮೇಶ್ ಸಂಗಟ್ಟಿ ಎಂಬುವರ ಮನೆಗಳು ನೆಲಕಚ್ಚಿ ಅಪಾರ ಪ್ರಮಾಣದ ಹಾನಿಯಾಗಿವೆ. ಗಿರೀಶ ಕರಡಿ ಎಂಬುವರಿಗೆ ಸೇರಿದ 2 ಆಕಳುಗಳು ಕೂಡ ಅಸುನೀಗಿದಘಟನೆ ನಡೆದಿದೆ. ಅದೇ ರೀತಿ ತಾಲೂಕಿನಾದ್ಯಂತ ಅನೇಕ ಮನೆಗಳು ಹಾಗೂ ಗೋಡೆಗಳು ನೆಲಕ್ಕೆ ಉರುಳಿ ಬಿದ್ದಿವೆ. ಇನ್ನೂ ಮಾಳಿಗೆ ಮನೆ ಹೊಂದಿದ ಕುಟುಂಬಸ್ಥರು ಅಡುಗೆ ಮಾಡಲಾಗದೇ ರಾತ್ರಿಯಿಡೀ ಮಲಗಲಾರದ ಸ್ಥಿತಿ ಎದುರಿಸುತ್ತಿದ್ದಾರೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *