ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ಸುರಿದ ಮಳೆಗೆ ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಪುರಾತನ ಹೊನ್ನಮ್ಮನ ಕೆರೆ ಕಳೆದ 18 ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರು ಹರಿದು ಬಂದಿರುವುದು ರೈತರಲ್ಲಿ ಸಂತಸ ಮೊಡಿಸಿದೆ. ಸೋಮವಾರ ದಿಂದ ಸತತವಾಗಿ ಸುರಿದ ಬಾರಿ ಮಳೆಗೆ ಈ ಗ್ರಾಮದ ಜನರಲ್ಲಿ ಸಂತೋಷ ಮನೆ ಮಾಡಿದೆ.2001ರಲ್ಲಿ ಸುರಿದ ಮಳೆಗೆ ಈ ಗ್ರಾಮದ ಐತಿಹಾಸಿಕ ಕೆರೆ ತುಂಬಿ ಕೋಡಿ ಬಿದ್ದಿತ್ತು. ಅದರ ನಂತರ ಕೆರೆಯ ಅಂಗಳವನ್ನು ಸಹ ತುಂಬದಂತಹ ಮಳೆಗಳಾಗಿವೆ. ಆದರೆ ಕಳೆದ ಒಂದು ತಿಂಗಳುಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಗ್ರಾಮದ ಹೊನ್ನಮ್ಮನ ಕೆರೆ ತುಂಬಿದೆ.ಹೀಗಾಗಿ ಮುಗದ ಗ್ರಾಮದ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ಜನರ ಸಂತೋಷಕ್ಕೆ ಪಾರವೇ ಇಲ್ಲ. ಸುಮಾರು 150 ಎಕರೆ ದಷ್ಟು ವಿಶಾಲ ಪ್ರದೇಶದಲ್ಲಿ ಇರುವ ಈ ಕೆರೆ ಪ್ರವಾಸಿಗರನ ತನ್ನತ ಕೈ ಬಿಸಿ ಕರೆಯುತ್ತಿದೆ, ಈ ಕೆರೆಯ ದಂಡೆಯ ಮೇಲೆ ಪುರಾತನ ಕಾಲದ ಶ್ರೀ ದುರ್ಗಾದೇವಿ ದೇವಸ್ಥಾನ ಇದು, ಧಾರವಾಡದಿಂದ 8 ಕಿಮೀ ದೂರದಲ್ಲಿ ಇರುವ ಮುಗದ ಗ್ರಾಮದಲ್ಲಿ ಇಂದು ರೈತರಲ್ಲಿ ಮಂದಹಾಸ ಮೂಡಿಸಿದೆ.ಇನ್ನೂ ಕೆರೆಗೆ ಭಾರೀ ಪ್ರಮಾಣದಲ್ಲಿ ಬಂದ ನೀರನ್ನು ವೀಕ್ಷಿಸಲು ಗ್ರಾಮದ ಜನರು ತಂಡೋಪ ತಂಡವಾಗಿ ಕೆರೆಗೆ ಆಗಮಿಸಿ ಸಂಭ್ರಮಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





