ಹುಬ್ಬಳ್ಳಿ: ನಿಲ್ಲದ ವರುಣನ ಆರ್ಭಟಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ಹಳ್ಳ ದಾಟುವಾಗ ಕಾಶಯ್ಯ ಹೊಸಳ್ಳಿಮಠ (55) ಎಂಬುವವರು ಕೊಚ್ಚಿ ಹೋಗಿದ್ದರು. ಇಂದು ಅವರ ಮೃತದೇಹ ಪತ್ತೆಯಾಗಿದೆ.ಊರ ಹಳ್ಳಕ್ಕೆ ಸೇತುವೆ ಇಲ್ಲದ್ದರಿಂದ ದುರಂತ ಸಂಭವಿಸಿದೆ. ಮೃತ ಕಾಶಯ್ಯನಿಗೆ ಮೂವರು ಹೆಣ್ಣುಮಕ್ಕಳಿದ್ದು, ಪರಿಹಾರ ನೀಡುವಂತೆ ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಇನ್ನಾದರೂ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.ಇನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಮರವೊಂದು ಬಸ್ ಮೇಲೆ ಬಿದ್ದಿದೆ. ಗಾಜುಗಳು ಪುಡಿಪುಡಿಯಾಗಿದ್ದು, ಬಸ್ಗೆ ಹಾನಿಯಾಗಿದೆ. ಮರ ಬಿದ್ದ ವೇಳೆ ಬಸ್ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





