Breaking News

10 ರಂದು ಮಹಾರಾಜಾ ಅಗ್ರಸೇನಅರ್ಬನ್ ಕೋ-ಆಫ್ ಕ್ರೆಡಿಟ್ ಲಿಮಿಟೆಡ್ ದಶಮಾನೋತ್ಸವ ಸಮಾರಂಭ

ಹುಬ್ಬಳ್ಳಿ: ಮಹಾರಾಜಾ ಅಗ್ರಸೇನ ಅರ್ಬನ್ ಕೋ-ಆಫ್ ಕ್ರೆಡಿಟ್ ಲಿ. 10 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ದಶಮಾನೋತ್ಸವ ಸಮಾರಂಭವು ಇದೆ ಆ. 10 ರಂದು ನಗರದ ವಾಳ್ವೆಕರ್ ಗಲ್ಲಿಯ ಅಗ್ರಸೇನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಅಮಿತ ವಿಜಯಕುಮಾರ ತಿಳಿಸಿದರು.ನಗರದಲ್ಲಿಂದು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ
ಸೊಸೈಟಿಯು 30-04-2010 ರಂದು ಕೇವಲ 24.40 ಲಕ್ಷ ಶೇರು ಬಂಡವಾಳರೊಂದಿಗೆ ಪ್ರಾರಂಭವಾದ ಸೊಸೈಟಿಯು 31-03-2019 ಕ್ಕೆ ರೂ 137.51 ಲಕ್ಷ ಶೇರು ಬಂಡವಾಳ ರೂ. 2440.80 ಲಕ್ಷ ಠೇವಣಿ ಹಾಗೂ
ರೂ.3015.88 ಲಕ್ಷ ದುಡಿಯುವ ಬಂಡವಾಳ
ಹೊಂದಿ ರೂ.1191.14 ಲಕ್ಷ ಸಾಲ ನೀಡಿ
ರೂ.41.08 ಲಕ್ಷ ಲಾಭವನ್ನು ಗಳಿಸಿ ಪ್ರಗತಿಯತ್ತ
ಬೆಳೆಯುತ್ತಿದೆ ಎಂದರು.
ಈ ಸಮಾರಂಭ ಕಾರ್ಯಕ್ರಮಕ್ಕೆ ಕರ್ನಾಟಕ ಸ್ಟೇಟ್ ಕೋ- ಆಫ್ ಕ್ರೆಡಿಟ್ ಸೊಸೆಟಿಸ ಫೆಡರೇಶನ್
ಬೆಂಗಳೂರಿನ ನಿರ್ದೇಶಕರಾದ ಸಂಜಯ ಪಿ ಹೊಸಮಠ, ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ ನಿ.ಗೋಕಾಕ ಅಧ್ಯಕ್ಷರಾದ ಪಂಚಾಚಾರ್ಯ ಆಗಮಿಸುವರು. ಈ ಸಂಘವು ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಾಲ, ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ
ಬೆಳವಣಿಗೆ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಅಶೋಕಕಿಮಾರ ಪ ಮಹಾಜನ, ಮಂಡಳಿ ಸದಸ್ಯರಾದ ಸುಭಾಶ ಆರ್ ಮಹಾಜನ, ಸುರೇಶ ಪಿ ಅಗರವಾಲ, ಭಾರತಿ ಎಸ್ ಮಹಾಜನ, ಮುಖೇಶ ಎಲ್. ಅಗ್ರವಾಲ ಹೇಮಂತ ಮೋದಿ ಉಪಸ್ಥಿತರಿದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *