ಧಾರವಾಡ: ಕಳೆದ ಒಂದು ತಿಂಗಳುಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೇ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕೆಲವು ಕಡೆ ಮರಗಳು ನೆಲಕ್ಕುರುಳುತ್ತಿವೆ. ಇದಕ್ಕೆ ಪೂರಕ ಎಂಬಂತೆ ಬುಧವಾರ ನಗರದ ಗಾಂಧಿನಗರದ ಮನೆ ಮೇಲೆ ಮರ ಬಿದ್ದಿದೆ.ಯಾವುದೇ ಹಾನಿ ಸಂಭವಿಸಿಲ್ಲ,ಇನ್ನೊಂದೆಡೆ ಹಲವು ಗ್ರಾಮಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಗ್ರಾಮದಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಘಟನೆ ನಡೆದಿವೆ. ಮಂಗಳವಾರವೂ ಸಹ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಜನತಾ ಪ್ಲಾಟ್ ನಲ್ಲಿರುವ ಬಸವರಾಜ್ ಅಮರಗೋಳ ಅವರ ಹೊಲದಲ್ಲಿದ್ದ ಬೃಹತ್ ಗಾತ್ರದ ಮರ ನೆಲಕ್ಕುರುಳಿತ್ತು,ಇನ್ನೂ ಮನೆ ಮೇಲೆ ಮರ ಬಿದ್ದಿರುವುದಕ್ಕೆ ಅಲ್ಲಿನ ಎರಡು ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





