Breaking News

ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ ಟೈನಲ್ಲಿ , ಪಾಟ್ನಾ ವಿರುದ್ಧ ಹರಿಯಾಣ ಜಯ

ಪಾಟ್ನಾ: ಭರ್ಜರಿ ಪೈಪೋಟಿ ಕಂಡುಬಂದ ಯುಪಿ ಯೋಧ ಹಾಗೂ ತಮಿಳ್​ ತಲೈವಾಸ್​ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ ಪೈರೇಟ್ಸ್​ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.ಯೋಧ ತಂಡ ಮೊದಲಾರ್ಧದಲ್ಲಿ 16-11 ರಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಲೈವಾಸ್ ರೈಡರ್​ಗಳು ಉತ್ತಮ ಪ್ರದರ್ಶನ ತೋರಿ 28-28 ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ಬಲಿಷ್ಠ ಪಾಟ್ನಾ ತಂಡವನ್ನು 35-26ರಲ್ಲಿ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.ಉತ್ತಮ ರೈಡಿಂಗ್​ ನಡೆಸಿದ ವಿಕಾಶ್​ ಖಂಡೋಲ 11ಮ, ವಿನಯ್​ 6 ಅಂಕ ಪಡೆದರೆ ಡಿಫೆಂಡರ್​ ರವಿಕುಮಾರ್​ 3, ಸುನಿಲ್​ 4, ಧರ್ಮರಾಜನ್​ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.ಪಾಟ್ನಾ ಪರ ಪರ್​ದೀಪ್​ ನರ್ವಾಲ್​ 14, ಜಾನ್​ ಕುನ್​ ಲೀ 4 ರೈಡಿಂಗ್​ ಅಂಕ ಪಡೆದು ಮಿಂಚಿದರೂ ಡಿಫೆಂಡರ್​ಗಳ ವೈಫಲ್ಯದಿಂದ ಸೋಲನುಭವಿಸಬೇಕಾಯಿತು.​

Share News

About admin

Check Also

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು…..

ಗುರುವಾರ ಮೊಹಾಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.ಗುರುವಾರ …

Leave a Reply

Your email address will not be published. Required fields are marked *