Breaking News

ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನ

ಲೌಸನ್ನೆ: ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದಾರೆ. ನಿನ್ನೆ ಸ್ವಿಜ್ಜರ್‌ಲ್ಯಾಂಡ್‌ನ ಲೌಸನ್ನೆ ಡೈಮಂಡ್ ಲೀಗ್ 2024 ರಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ 89.49ಮೀ. ಎಸೆಯುವ ಮೂಲಕ ಸೀಸನ್‌ನ ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ.

ಗ್ರೇನಡಾದ ಆಂಡರ್ಸನ್ ಪೀಟರ್ಸ್ 90.61ಮೀ., ನೀರಜ್ ಚೋಪ್ರಾ 89.49ಮೀ., ಹಾಗೂ ಜರ್ಮನಿಯ ಜೂಲಿಯಸ್ ವೇಬರ್ 87.08ಮೀ. ಎಸೆಯುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡರು. ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10ಮೀ. ದೂರ ಎಸೆದರು. ತಮ್ಮ ಮೊದಲ ನಾಲ್ಕು ಪ್ರಯತ್ನದವರೆಗೂ ಚೋಪ್ರಾ ಮೊದಲ ಮೂರು ಸ್ಥಾನಗಳಿಂದ ಹೊರಗುಳಿದ್ದರು. ಪೀಟರ್ಸ್ ತಮ್ಮ ಕೊನೆಯ ಪ್ರಯತ್ನದಲ್ಲಿ 90.61 ಮೀ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು.

ಚೋಪ್ರಾ ತನ್ನ ಐದನೇ ಪ್ರಯತ್ನದಲ್ಲಿ 85.58ಮೀ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ಮರಳಿದರು. ನಂತರ ತಮ್ಮ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ 89.49ಮೀ ಎಸೆಯುವ ಮೂಲಕ ಸೀಸನ್‌ನ ಎರಡನೇ ಸ್ಥಾನವನ್ನು ಪಡೆದುಕೊಂಡರು ಮತ್ತು ಸೀಸನ್‌ ಅತ್ಯುತ್ತಮ ಎಸೆತವನ್ನು ನಿರ್ಮಿಸಿದರು. ಲೌಸನ್ನೆ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಪಡೆಯುವ ಮೂಲಕ ಸೆಪ್ಟೆಂಬರ್‌ನಲ್ಲಿ ಬ್ರಸೆಲ್ಲಿ ನಡೆಯಲಿರುವ ಈವೆಂಟ್‌ನ ಫೈನಲ್‌ನಲ್ಲಿ ಅಗ್ರ ಆರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಖಾತರಿಪಡಿಸಿಕೊಂಡಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *