ಮಂಡ್ಯ: ತಾಂತ್ರಿಕ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಭಾರತ್.. ಆರೋಗ್ಯ ಕನಾ೯ಟಕ ಮತ್ತು ರಾಷ್ಟ್ರೀಯ ಕಾಯ೯ಕ್ರಮಗಳು/ ಯೋಜನೆಗಳು ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಮಂಡ್ಯ ಯವರಿಂದ ಆಯೋಜಿಸಲಾಗಿತ್ತು. ಸ್ಪರ್ದೆಯಲ್ಲಿ ಬಾಸಪಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅರ್ಪಿತ ಪ್ರಥಮ ಬಹುಮಾನ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನ ಸಪಪೂ ಕಾಲೇಜಿನ ವಿದ್ಯಾರ್ಥಿನಿಯರಾದ ಪೂಜಾ ಮತ್ತು ದಿವ್ಯ ಪಡೆದುಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ತಾ ಆರೋಗ್ಯಾಧಿಕಾರಿ ಹರೀಶ್,ಸಪಪೂ ಕಾಲೇಜಿನ ಪ್ರಾಂಶುಪಾಲರಾದ ಲಿಂಗಣ್ಣಸ್ವಾಮಿ,ಉಪನ್ಯಾಸಕರಾದ ವೆಂಕಟರಾಮು,ರಾಸೇಯೋ ಅಧಿಕಾರಿಗಳಾದ ಚಂದ್ರಶೇಖರ್, ಆರೋಗ್ಯ ಪರಿವೀಕ್ಷಕಿಯಾದ ಶಿವಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು,ಪ್ರಥಮ ಬಹುಮಾನ ಪಡೆದ ನಮ್ಮ ಕಾಲೇಜಿನವಿದ್ಯಾರ್ಥಿನಿಯಾದ ಅರ್ಪಿತಳನ್ನ ಪ್ರಾಂಶುಪಾಲರಾದ ಡಿಬಿ ಸತ್ಯರವರು ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





