Breaking News

ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪ್ ನಡುವೆ ಡಿಕ್ಕಿ : ನಿವೃತ್ತ ಎಎಸ್‌ಐ ದುರ್ಮರಣ

ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.
ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ‌ ಸೇರಿದ ಜೀಪು, ಸ್ಕೂಟಿಗೆ ಡಿಕ್ಕಿ ಹೊಡೆಯಿತು.
ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅಣ್ಣಯ್ಯ ಗೌಡರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *