Breaking News

ಮಂಡ್ಯ ಜಿಲ್ಲೆಯ ವತಿಯಿಂದ ಉತ್ತರಕರ್ನಾಟಕ, ಕೊಡಗು ನೆರೆ ಸಂತ್ರಸ್ತರಿಗೆ ಪಾದಯಾತ್ರೆಯ ಮೂಲಕ ನಿಧಿ ಸಂಗ್ರಹಕ್ಕೆ ನಿರ್ಧಾರ: ಚಂದ್ರಮೋಹನ್

ಮಂಡ್ಯ :ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಆಗಷ್ಟ್-14ರ ಬುಧವಾರ ಬೆಳಿಗ್ಗೆ 9.30ಗಂಟೆಗೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀಗಳಾದ ಶ್ರೀ ಗಂಗಾಧರಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಶಾಸಕ ನಾರಾಯಣಗೌಡರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ನಿಧಿ ಮತ್ತು ಅಗತ್ಯ ವಸ್ತುಗಳನ್ನು ಪಾದಯಾತ್ರೆ ನಡೆಸಿ ಸಂಗ್ರಹಿಸಲಾಗುವುದು ಎಂದು ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ತಿಳಿಸಿದ್ದಾರೆ.ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಎಂ.ಕೆ.ಬೊಮ್ಮೇಗೌಡ ವೃತ್ತ, ಹೊಸಹೊಳಲು ರಸ್ತೆ, ಕೆ.ಆರ್.ಪೇಟೆ ಮುಖ್ಯ ರಸ್ತೆ, ದುರ್ಗಾಭವನ್ ಸರ್ಕಲ್, ನಾಗಮಂಗಲ ರಸ್ತೆ, ಟೌನ್ ಕ್ಲಬ್ ಸರ್ಕಲ್, ಚನ್ನರಾಯಪಟ್ಟಣ ರಸ್ತೆ ಸೇರಿದಂತೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ನೆರೆಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳು ಮತ್ತು ನಿಧಿಯನ್ನು ಸಂಗ್ರಹಿಸಲಿದ್ದಾರೆ. ಆದ್ದರಿಂದ ಪಟ್ಟಣದ ವರ್ತಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ತಾಲೂಕಿನ ರೈತ ಬಾಂಧವರು ತಮ್ಮ ಕೈಲಾದ ಸಹಾಯವನ್ನು ನೊಂದವರಿಗೆ ಮಾಡುವ ಮೂಲಕ ಆಸರೆಯಾಗಬೇಕು ಎಂದು ಮನವಿ ಮಾಡಿದ ಚಂದ್ರಮೋಹನ್ ಕೆ.ಆರ್.ಪೇಟೆಯ ಕನ್ನಡಪರ ಸಂಘಟನೆಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಸೇವಾ ಕಾರ್ಯಕರ್ತರು, ಎಳನೀರು ವ್ಯಾಪಾರಿಗಳು, ತನು, ಮನ, ಧನ ಹಾಗೂ ಅಗತ್ಯ ವಸ್ತುಗಳನ್ನು ದಾನಮಾಡಿ ನೆರೆ ಸಂತ್ರಸ್ತರಿಗೆ ಕೈಲಾದ ಸಹಾಯ ಮಾಡಬೇಕು..ಪಾದಯಾತ್ರೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ 9 ಗಂಟೆಗೆ ಪ್ರವಾಸಿ ಮಂದಿರದ ಬಳಿ ಜಮಾಯಿಸಬೇಕು.. ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ಸಹಾಯ ಮಾಡಬೇಕು ಎಂದು ಶಾಸಕರ ಆಪ್ತಸಹಾಯಕ ದಯಾನಂದ ಮನವಿ ಮಾಡಿದ್ದಾರೆ

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *