ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿ ಜಿಲ್ಲೆಯಲ್ಲೂ ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಕೋರ್ಟ್ಗಳನ್ನು ಸ್ಥಾಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಚಿಂತನೆ ನಡೆಸಿದೆ.
‘ದರುಲ್-ಖ್ವಾಜಾ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಕೋರ್ಟ್ಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಕರಾರುಗಳನ್ನು ಬಗೆಹರಿಸಲಿವೆ. ಜುಲೈ 15ರಂದು ದೆಹಲಿಯಲ್ಲಿ ನಡೆಯಲಿರುವ ಎಐಎಂಪಿಎಲ್ಬಿ ಸಭೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಷರಿಯತ್ ಕೋರ್ಟ್ ತೆರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಐಎಂಪಿಎಲ್ಬಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದಲ್ಲಿ ಇಂತಹ 40 ಕೋರ್ಟ್ಗಳು ಸಕ್ರಿಯವಾಗಿವೆ. ಇದೇ ಮಾದರಿಯ ಕೋರ್ಟ್ಗಳನ್ನು ದೇಶಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲೂ ತೆರೆಯುವ ಚಿಂತನೆಯಿದೆ ಇದೆ. ತಕರಾರುಗಳನ್ನು ಬಗೆಹರಿಸಿಕೊಳ್ಳಲು ಸಮುದಾಯದವರು ಅನ್ಯ ಸಂಸ್ಥೆಗಳ ಮೊರೆ ಹೋಗುವ ಬದಲು ಧರ್ವಧಾರಿತ ಈ ಕೋರ್ಟ್ನಲ್ಲೇ ಪರಿಹಾರ ಕಂಡುಕೊಳ್ಳಲಿ ಎಂಬುದು ಉದ್ದೇಶ. ಷರಿಯತ್ ಕೋರ್ಟ್ಗಳ ಜತೆಗೆ ತಾಫೀಮ್ಎ-ಷರಿಯತ್ ಸಮಿತಿಗಳನ್ನು (ಟಿಇಎಸ್) ಸಹ ಸಕ್ರಿಯಗೊಳಿಸಲಾಗುವುದು ಎಂದು ಎಐಎಂಪಿಎಲ್ಬಿ ಹಿರಿಯ ಸದಸ್ಯ ಜಾಫರಿಯಾಬ್ ಜಿಲಾನಿ ತಿಳಿಸಿದ್ದಾರೆ. ಒಂದು ಷರಿಯತ್ ಕೋರ್ಟ್ ನಿರ್ವಹಣೆಗೆ -ಠಿ; 50 ಸಾವಿರ ವೆಚ್ಚವಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಇಂತಹ ಕೋರ್ಟ್ ತೆರೆಯಲು ಬೇಕಾಗುವ ಆರ್ಥಿಕ ಸಂಪನ್ಮೂಲದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಮುಸ್ಲಿಮರ ಕೆಲವು ಪಂಗಡದ ವ್ಯಕ್ತಿಗಳು ರಾಮಮಂದಿರದ ಪರವಾಗಿ ಇದ್ದಾರೆ. ಹೀಗಾಗಿ ಬಾಬರಿ ಮಸೀದಿ ವಿಷಯದ ಕುರಿತು ಮುಂದಿನ ನಡೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಜಿಲಾನಿ ಹೇಳಿದ್ದಾರೆ.
ಷರಿಯತ್ ಕೋರ್ಟ್ ಎಂದರೇನು?
ಭಾರತದಲ್ಲಿ ಮುಸ್ಲಿಮ್ ದೊರೆಗಳ ಆಡಳಿತದಲ್ಲಿ ಇದ್ದ ನ್ಯಾಯಿಕ ವ್ಯವಸ್ಥೆಯೆ ಷರಿಯತ್. ಇದು ಮುಸ್ಲಿಮರ ವೈಯಕ್ತಿಕ ಕಾನೂನಿನ ಅನ್ವಯ ನಡೆಯುತ್ತಿತ್ತು. ಮುಫ್ತಿ ಮತ್ತು ಉಲೆಮಾಗಳು ಧರ್ಮ ಸೂಕ್ಷ್ಮಗಳನ್ನು ರ್ತಸಿ ನ್ಯಾಯನಿರ್ಣಯಕ್ಕೆ ಸಹಾಯ ಮಾಡುತ್ತಿದ್ದರು. 1937ರಲ್ಲಿ ಬ್ರಿಟಿಷ್ ಆಡಳಿತ ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆ ಜಾರಿಗೊಳಿಸಿತು. ಇದರ ಅನ್ವಯ ತಕರಾರುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಾನೂನಿನ ಮಾನ್ಯತೆ ದೊರೆಯಿತು. ಕೆಲವು ಮುಸ್ಲಿಮರು ಹಿಂದು ಪದ್ಧತಿ ಆಚರಣೆ ಮಾಡುತ್ತಿದ್ದ ಕಾರಣ ಅದನ್ನು ತಪ್ಪಿಸಿ, ಮುಸ್ಲಿಮರ ನೀತಿ ಸಂಹಿತೆಯಾದ ಷರಿಯತ್ ಪಾಲಿಸಲು ಕಾಯ್ದೆ ರೂಪಿಸಲು ಮುಸ್ಲಿಂ ಮುಖಂಡರು ಒತ್ತಾಯಿಸಿದ ಕಾರಣ ಈಸ್ಟ್ ಇಂಡಿಯಾ ಕಂಪನಿ ಈ ಕಾಯ್ದೆಗೆ ಅನುಮೋದನೆ ನೀಡಿತು. 1973ರಲ್ಲಿ ಷರಿಯತ್ ರಕ್ಷಣೆಗಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ರಚಿಸಲಾಯಿತು. ಇದರಲ್ಲಿ ಮುಸ್ಲಿಮರ ವಿವಿಧ ಪಂಗಡಗಳ ಮುಖಂಡರು, ಮೌಲ್ವಿಗಳು, ವಕೀಲರು, ರಾಜಕಾರಣಿಗಳು ಇರುತ್ತಾರೆ.
ಏನಿದು ಟಿಇಎಸ್?
ತಾಫೀಮ್ಎ-ಷರಿಯತ್ ಸಮಿತಿಗಳು (ಟಿಇಎಸ್) 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಇದು ಷರಿಯತ್ ಕೋರ್ಟ್ಗೆ ನ್ಯಾಯಾಧಿಪತಿ ಮತ್ತು ವಕೀಲರನ್ನು ನೇಮಿಸುತ್ತವೆ. ಷರಿಯತ್ ಕೋರ್ಟ್, ಮುಸ್ಲಿಂ ವೈಯಕ್ತಿಕ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಸಮ್ಮೇಳನ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





