ಸಂಪೂರ್ಣ ಸಾಲಮನ್ನಾ ವಿಚಾರವಾಗಿ ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ನಡೆಸ್ತಿರುವ ರೈತ ಮುಖಂಡರ ವಿರುದ್ದ ಸಿಎಂ ಎಚ್‌ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದು ಸಂಪೂರ್ಣ ಸಾಲ ಮನ್ನಾಗೆ ಬೇಡಿಕೆಯಿಡುವವರಿಗೆ ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲಾ ಎಂದು ಪ್ರಶ್ನಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಅವರು ಸಾಲ ಮನ್ನಾ ಮಾಡಿ ಅಂತಾ ರಸ್ತೆಯಲ್ಲಿ ಕೂರುವವರು ಅಂದು ಜಾತಿಭ್ರಮೆ ಬಿಟ್ಟು, ಹಣದ ವ್ಯಾಮೋಹ ಬಿಟ್ಟು ಓಟು ಹಾಕಿದ್ರೆ ಇಂದು ಕುಮಾರಸ್ವಾಮಿಯನ್ನ ಕೇಳುವ ನೈತಿಕತೆ ಇರ್‍ತಿತ್ತು. ನಾನು ಯಾವುದೇ ಕಾರಣಕ್ಕೂ ಹೆದರುವವನಲ್ಲ ನಾನು ರೈತರ ಪರವಾಗಿರುವವನು. ಸಣ್ಣತನವನ್ನ ಬಿಡಿ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವವನು ನಾನು. ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕ ಬೇರೆ ಅಲ್ಲ ಸಮಗ್ರ ಕರ್ನಾಟಕದ ಅಭಿವೃದ್ದಿ ನನ್ನ ಗುರಿ ಎಂದು ತಿಳಿಸಿದ್ರು. ಅಲ್ಲದೇ ಪ್ರತ್ಯೇಕ ರಾಜ್ಯ ಬೇಕಂತೆ ತಗೋಳ್ರಪ್ಪಾ. ಬೇರೆ ರಾಜ್ಯ ತಗೊಂಡು ಏನ್ ಆಗ್ತಿರೋ ನೋಡೋಣ. ಇದಕ್ಕೆ ಪೂರ್ವಿಕರು ಎಲ್ಲರು ಸೇರು ಕರ್ನಾಟಕ ಏಕೀಕರಣ ಮಾಡಬೇಕಿತ್ತ ಎಂದು ಪ್ರಶ್ನಿಸಿದ್ರು. ಸಣ್ಣತನದಲ್ಲಿ ಜಾತಿ ಜಾತಿ ಮಧ್ಯೆ ವೈಷಮ್ಯವನ್ನುಂಟು ಮಾಡಿ,ಆ ಭಾಗ ಈ ಭಾಗ ಅಂತಾ ಕಿಡಿ ಹಚ್ಚಿ ಮುಗ್ದ ಜನರ ಜೊತೆ ಇನ್ನೂ ಎಷ್ಟು ಚೆಲ್ಲಾಟವಾಡ್ತೀರಿ ಎಂದು ಪ್ರಶ್ನಿಸಿದ್ರು.
ಎಚ್.ಡಿ.ಕುಮಾರಸ್ವಾಮಿ — ಮುಖ್ಯಮಂತ್ರಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





