Breaking News

ಡಾ.ನಂಜುಂಡಪ್ಪ ವರದಿ ಸ್ಪೆಷಲ್ ಏನು.., ಪ್ರತ್ಯೇಕ ರಾಜ್ಯದಿಂದ ಅಭಿವೃದ್ಧಿ ಆಗ್ಬಿಡುತ್ತಾ..

ಒಗ್ಗಟ್ಟಿನಲ್ಲಿ ಬಲವಿದೆ ಅಂತ ಆಡೋ ಹುಡುಗರಿಗೂ ಗೊತ್ತು. ಆದ್ರೇ, ಈ ಸಾಮಾನ್ಯ ಜ್ಞಾನ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ. ಅಸಲಿಗೆ ಉತ್ತರಕರ್ನಾಟಕ ಹಿಂದುಳಿಯಲು ಕಾರಣವೇ ಒಗ್ಗಟ್ಟಿನ ಕೊರತೆ. ಜನ, ಹೋರಾಟಗಾರರು ಒಗ್ಗಟ್ಟಾದ್ರೇ ತಮ್ಮ ಬೇಳೆ ಬೇಯೋದಿಲ್ಲ ಅಂತ ಒಡೆದೇ ಆಳ್ತಾರೆ. ಅನ್ಯಾಯ ಸರಿಪಡಿಸಿ ಇಲ್ಲವೇ ಪ್ರತ್ಯೇಕ ರಾಜ್ಯ ಘೋಷಿಸಿ ಅಂತ ಒಂದಿಷ್ಟು ಹೋರಾಟಗಾರರು ಬಂದ್ ಕರೆ ನೀಡಿದ್ರೇ, ಬಂದ್ ಗೇ ನಮ್ ಬಂದ್ ಇನ್ನೊಂದಿಷ್ಟು ಮಂದಿ ಅಪಸ್ವರ ಎತ್ತಿದಾರೆ.
1956ರಲ್ಲಿ ಕರ್ನಾಟಕ ಏಕೀಕರಣವಾಗಿದೆ. ಆದ್ರೇ, ಪ್ರಾದೇಶಿಕವಾಗಿ ಉತ್ತರ ಮತ್ತು ದಕ್ಷಿಣ ಎರಡೂ ಪ್ರದೇಶಗಳೂ ಹಿಂದುಳಿರೋದು ಸ್ಪಷ್ಟ. ಆದ್ರೇ, ಬೆಂಗಳೂರು ಇದಕ್ಕೆ ಅಪವಾದ. ದಕ್ಷಿಣಕ್ಕೆ ಹೋಲಿಸಿದ್ರೇ, ಉತ್ತರಕರ್ನಾಟಕಕ್ಕೆ ಒಂದಿಷ್ಟು ಮಲತಾಯಿ ಧೋರಣೆ ತಾಳಿರೋದು ಸುಳ್ಳೇನಲ್ಲ. ದಶಕಗಳಿಂದ ಈ ಅನ್ಯಾಯದ ವಿರುದ್ಧ ದನಿ ಎತ್ತಲಾಗಿತ್ತು. ಆದ್ರೇ, ಮೈತ್ರಿ ಸರ್ಕಾರದ ಬಜೆಟ್ ಮತ್ತು ರಾಜಕೀಯ ಪ್ರಾತಿನಿಧ್ಯ ಈ ಭಾಗಕ್ಕೆ ಸಿಗದೇ ಇರೋದ್ರಿಂದಾಗಿ ಪ್ರತ್ಯೇಕ ಕೂಗು ಎಂಬ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ವಿರುದ್ಧ ಆಗಸ್ಟ್ 2ಕ್ಕೆ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ 13 ಜಿಲ್ಲೆಗಳ ಬಂದ್ ಕರೆ ನೀಡಿದಾರೆ. 
ಸೋಮಶೇಖರ್, ಅಧ್ಯಕ್ಷ, ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ
ಆದ್ರೇ, ಈಗ ಇದೇ ಹೋರಾಟಕ್ಕೆ ಅಪಸ್ವರ ಕೇಳಿ ಬಂದಿದೆ. ಕೆಲ ಸಂಘಟನೆಗಳು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೀತಿರೋ ಬಂದ್ ಗೆ ತಮ್ಮ ಬೆಂಬಲವಿಲ್ಲ ಅಂತ ಸ್ಪಷ್ಟಪಡಿಸಿವೆ.  ಏಕೀಕರಣಕ್ಕೆ ಸಿಂಹಪಾಲು ಕೊಡುಗೆ ನೀಡಿದ್ದೇ ಉತ್ತರಕರ್ನಾಟಕ. ಧಾರವಾಡ ವಿದ್ಯಾವರ್ಧಕ ಸಂಘ, ಅದರಗುಂಚಿ ಸಿದ್ದನಗೌಡ ಪಾಟೀಲರು ನಡೆಸಿದ ಉಪವಾಸ ಸತ್ಯಾಗ್ರಹ, ಹುಬ್ಬಳ್ಳಿ ಗಲಭೆ, ಪಾಟೀಲ ಪುಟ್ಟಪ್ಪ, ವ್ಯಾಸರಾವ ಬಲ್ಲಾಳ್, ಸಿದ್ದಪ್ಪ ಕಂಬಳಿ, ಹುಯಿಲಗೋಳ ನಾರಾಯಣರಾಯರು ಹೀಗೆ ಸಾಕಷ್ಟು ಮಹನೀಯರ ಶ್ರಮವಿದೆ. ಇಂಥದರಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸ್ತಿರೋದ್ಯಾಕೆ ಅಂತ ಕೆಲ ಸಂಘಟನೆಗಳು ಬಂದ್ ಗೆ ಭಿನ್ನರಾಗ ಎತ್ತಿವೆ. ಮಹದಾಯಿ ಹೋರಾಟದಲ್ಲಿ ಆಸಕ್ತಿ ತೋರಿಸದೇ ಈಗ ಪ್ರತ್ಯೇಕತೆಯ ಬೆಂಕಿಗೆ ತುಪ್ಪ ಸುರಿಯೋ ಮೂಲಕ ಕೆಲವರು ನೀಚ ರಾಜಕಾರಣ ಮಾಡ್ತಿದಾರೆ ಅನ್ನೋ ಆಕ್ರೋಶವೂ ವ್ಯಕ್ತವಾಗ್ತಿದೆ. ನೀರಾವರಿ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯ, ವಸತಿ ಭೂಸುಧಾರಣೆ, ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಚನಾತ್ಮಕ ಹೋರಾಟ ನಡೆಸೋಣ. ಅದನ್ನ ಬಿಟ್ಟು ಪ್ರತ್ಯೇಕ ಧ್ವನಿ ಬೇಡ ಅಂತ ಭಿನ್ನ ದನಿ ಎತ್ತುತ್ತಿರೋದ ವಾದ. 
ಮಹೇಶ ಪತ್ತಾರ, ಕಾರ್ಮಿಕ ಮುಖಂಡ
ಅಮೃತ ಇಜಾರಿ, ಅಧ್ಯಕ್ಷ, ಕರವೇ ಕಾರ್ಮಿಕ, ಆಟೋಚಾಲಕರ ಸಂಘ, ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ದಲಿತ ಪರ ಸಂಘಟನೆಗಳು ಸೇರಿ ಕೆಲವರು ವಿರೋಧಿಸ್ತಿದಾರೇನೋ ಸರಿ. ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿರೋ ಡಾ. ಪಾಟೀಲ ಪುಟ್ಟಪ್ಪನವರೇ ಪ್ರತ್ಯೇಕತೆಯ ಬಗ್ಗೆ ದನಿ ಎತ್ತಿದಾರೆ ಅಂದ್ರೇ ಅದೇನು ಸಣ್ಣ ಮಾತಲ್ಲ. ಈವರೆಗೂ ಈ ಭಾಗಕ್ಕೆ ಅನ್ಯಾಯವಾಗ್ತಿದ್ರೂ ಯಾವೊಬ್ಬ ಜನಪ್ರತಿನಿಧಿಯೂ ಹೋರಾಟ ನಡೆಸಿಲ್ಲ. ಹಾಗಾದ್ರೇ, ಇದೇ ಭಾಗದವರೇ ಸಿಎಂ ಹುದ್ದೆಯನ್ನೂ ಅಲಂಕರಿಸಿದ್ರು. ಆಗ ಇವರಿಗೆ ಕೆಲಸ ಮಾಡೋಕೆ ಯಾರಾದ್ರೂ ಅಡ್ಡಿಯಾಗಿದ್ರೇ ಅನ್ನೋದನ್ನೂ ಗಮನಿಸಬೇಕಲ್ವೇ.. ಇದಕ್ಕೆ ಕಾರಣಕ್ಕೆ ಇದೇ ರೀತಿ ಅನ್ಯಾಯವಾದ್ರೇ ಪ್ರತ್ಯೇಕ ರಾಜ್ಯ ಕೇಳ್ಬೇಕಾಗುತ್ತೆ ಅಂತ ಡಾ. ಪಾಪು ಗುಡುಗಿದ್ರು.  ಪ್ರತ್ಯೇಕ ಕೂಗಿನ ಹಿಂದೆ ರಾಜಕಾರಣಿಗಳ ಚಿತಾವಣೆಯೂ ಇದೆ. ಹಾಗೇ ಪ್ರತ್ಯೇಕ ರಾಜ್ಯ ಕೇಳ್ಬೇಡಿ ಅಂತ ಅದನ್ನ ವಿರೋಧಿಸೋರಿಗೆ ಹಿತಾಸಕ್ತಿ ಇಲ್ಲವೇನೆಂದಲ್ಲ. ಡಾ. ಡಿ.ಎಂ ನಂಜುಂಡಪ್ಪ ವರದಿ ಅನುಸಾರ, ಉತ್ತರದ 59 ಹಾಗೂ ದಕ್ಷಿಣದ 55 ತಾಲೂಕುಗಳು ಹಿಂದುಳಿದಿವೆ. ಅಂದ್ರೇ ಇದರ ಅರ್ಥ ರಾಜ್ಯ ಹಿಂದುಳಿಯೋದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಮುಖ್ಯ. ಹಾಗೇ ಉತ್ತರಕರ್ನಾಟ ಹಿಂದುಳಿಯೋದಕ್ಕೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಅನ್ನೋದನ್ನ ಯಾರೂ ಮರೆಯಬಾರದು. ಇಲ್ಲಿನ ಜನಪ್ರತಿನಿಧಿಗಳು, ಹೋರಾಟಗಾರರು ಜತೆಗೆ ಜನ ಒಗ್ಗಟ್ಟಾದ್ರೇ ಮಾತ್ರ ತಾರತಾಮ್ಯ ನಿವಾರಿಸೋಕೆ ಸಾಧ್ಯ ಅನ್ನೋದನ್ನ ಮರೆಯಬಾರದು.    
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *