ಜಮ್ಮುಕಾಶ್ಮೀರದಲ್ಲಿ
ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ಬಿಎಸ್ ಎಫ್ ನ ಎನ್ ಎಸ್ ಜಿಕಮಾಂಡೋ ಆಗಿದ್ದ ಯೋಧ ರಮೇಶ ,ಸಿ ನರಗುಂದ ಅಂತ್ಯಕ್ರಿಯೇಗೆ ಸ್ಮಶಾನವೇ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹೌದು. ಕುಂದಗೋಳ ತಾಲೂಕಿನ ಕೋನೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಕಟ್ಟಿ ಮೃತ ಯೋಧ ರಮೇಶ ಅವರ ಸ್ವಗ್ರಾಮ. ಈ ಗ್ರಾಮದಲ್ಲಿ ಯಾರಾದ್ರು ಸಾವನ್ನಪಿದ್ರೆ ಅಂತ್ಯಕ್ರಿಯೇ ಮಾಡಲು ಸಾರ್ವಜನಿಕ ಸ್ಮಶಾನವೇ ಇಲ್ಲ.
ಸತ್ತವರನ್ನು ಎಲ್ಲಿ ಅಂತ್ಯಕ್ರಿಯೇ ಮಾಡಬೇಕು ಎಂಬ ನೋವು ಈ ಗ್ರಾಮದಲ್ಲಿ ಸತ್ತವರ ಕುಟುಂಬಕ್ಕೆ ಕಾಡುತ್ತಿದೆ. ಈಗ ಅಂತದೇ ಪರಸ್ಥಿತಿ ಯೋಧನ ಕುಟುಂಬಕ್ಕೂ ಬಂದಿದೆ.
ರಾಜ್ಯ ಸರ್ಕಾರ ಗ್ರಾಮಿಣ ಸ್ಮಶಾನಕ್ಕಾಗಿ ಸಾಕಷ್ಟು ಅನುದಾನ ಮಿಸಲ್ಲಿಡುತ್ತದೆ. ಆದ್ರೆ ಹೊಸಕಟ್ಟಿ ಗ್ರಾಮಸ್ಥರಿಗೆ ಸ್ಮಶಾನ ಭೂಮಿಯ ಭಾಗ್ಯ ಸಿಕ್ಕಿಲ್ಲ. ಗ್ರಾಮಕ್ಕೆ ಸ್ಮಶಾನ ಜಾಗ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದ್ರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಯೋಧನ ಕುಟುಂಬಕ್ಕೆ ಜಿಲ್ಲಾಧಿಕಾರಿ ಸಾಂತ್ವನ…
ಹೊಸಕಟ್ಟಿ ಗ್ರಾಮದಲ್ಲಿರುವ ಯೋಧ ರಮೇಶ ಮನೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್ ಪಿ ಸಂಗಿತಾ, ಎ ಸಿ ಇಬ್ರಾಹಿಂ ಮೈಗೂರ್ ಭೇಟಿ ನೀಡಿ, ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಸ್ಮಶಾನ ಭೂಮಿಯ ಸಮಸ್ಯೆಯನ್ನು ತೆರೆದಿಟ್ಟರು. ಸ್ಮಶಾನ ಇಲ್ಲದ ಕಾರಣ ನಮ್ಮೂರ ಮಗನಾದ ವೀರ ಮರಣ ಹೊಂದಿದ ರಮೇಶ ನರಗುಂದ ಅಂತ್ಯಕ್ರಿಯೆಯನ್ನು ಗ್ರಾಮದ ಮಧ್ಯಭಾಗವಾದ ಹನುಮಂತನ ದೇವಸ್ಥಾನದ ಪಕ್ಕದಲ್ಲೆ ಮಾಡಿ ಎಂದು ಜಿಲ್ಲಾ ಅಧಿಕಾರಿ ಗಳಲ್ಲಿ ಮನವಿ ಮಾಡಿಕೊಂಡರು.
ನಾಳೆ ದೆಹಲಿಯಿಂದ ಬೆಳಗಾವಿಗೆ ಯೋಧನ ಮೃತದೇಹ ಆಗಮಿಸಲಿದೆ. ಬೆಳಗ್ಗೆ 10 ಗಂಟೆಗೆ ಗ್ರಾಮಕ್ಕೆ ಆಗಮಿಸುವ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲು ಸಕಲ ಸಿದ್ದತೆ ಮಾಡಲಾಗಿದೆ ಎಂದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೋರಿಸಿದ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವದು. ನಂತರ ಗ್ರಾಮದಲ್ಲಿನ ಸ್ಮಶಾನದ ಬಗ್ಗೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿವದಾಗಿ ಭರವಸೆ ನೀಡಿದರು.
ಆದರೆ ಯೋಧ ರಮೇಶ ಸಿ ನರಗುಂದ ಅಂತ್ಯಕ್ರಿಯೆ ಗೋಂದಲ ಗೂಡಿನಲ್ಲಿಯೇ ಸಾಗಿದೆ. ಯೋಧನ ಅಂತ್ಯಕ್ರಿಯೆಯನ್ನು ಎಲ್ಲಿ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದ್ದು,
ಯೋಧನ ಮನೆಯಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





