ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸ್ ದಿನದಿಂದ ದಿನಕ್ಕೆ ಆಘಾತಘಾರಿ ಸಂಗತಿಗಳನ್ನ ಹೊರ ಹಾಕ್ತಿದೆ. ಕೊಲೆ ಕೇಸಿನಲ್ಲಿ ಇದೆ ಆರೋಪದ ಮೇಲೆ ಹುಬ್ಬಳ್ಳಿಯ ಇಬ್ಬರು ಯುವಕರನ್ನ ಎಸ್ಐಟಿ ಬಂಧಿಸಿತೋ ಆಗಿನಿಂದಲೂ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದ್ರೇ, ಬಂಧಿತ ಇಬ್ಬರು ಯುವಕರು ಅಮಾಯಕರಂತೆ, ಅವರನ್ನ ಬಿಟ್ ಬಿಡಿ ಅಂತ ಇವತ್ತು ಆರೋಪಿಗಳ ಪರವೇ ಪ್ರತಿಭಟನೆ ನಡೆದಿದೆೆ.
ಹುಬ್ಬಳ್ಳಿಗೂ ಗೌರಿ ಕೊಲೆ ಕೇಸಿಗೂ ಲಿಂಕ್ ಆದ್ಮೇಲೆ ವಾಣಿಜ್ಯನಗರಿ ಮತ್ತೊಮ್ಮೆ ಕುಖ್ಯಾತಿ ಪಡ್ಕೊಂಡಿತ್ತು. ಈಗ ಕೊಲೆ ಕೇಸಿನಲ್ಲಿ ನೆರವು ನೀಡಿದ ಆರೋಪದ ಮೇಲೆ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ಎಸ್ಐಟಿ ವಶಕ್ಕೆ ತನಿಖೆಗೊಳಪಡಿಸಿದೆ. ಅಸಲಿಗೆ ಇವರು ಅಪರಾಧಿಗಳಾ ಇಲ್ಲ ನಿರಪರಾಧಿಗಳಾ ಅನ್ನೋದ್ ಇನ್ನೂ ಕನ್ಫರ್ಮ್ ಆಗಿಲ್ಲ. ಯಾವುದೇ ಕೋರ್ಟ್ ಇಲ್ಲ ತನಿಖಾಧಿಕಾರಿ ಸ್ಪಷ್ಟಪಡಿಸಿಲ್ಲ. ಇಷ್ಟಿದ್ರೂ ಇವರು ನಿಪರಾಧಿಗಳು, ಅಮಾಯಕರು ಅಂತ ಇವರ ಪರವಾಗಿ ಈಗ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೀತು.
ಗೌರಿ ಕೊಲೆಗೈದ ಪರಶುರಾಮ ವಾಗ್ಮೋರೆಯನ್ನ ತನ್ನ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದ ಆರೋಪ ಗಣೇಶ ಮಿಸ್ಕಿನ್ ಮೇಲಿದೆ. ಅತ್ತ ಹತ್ಯೆ ಬಳಿಕ ವಾಗ್ಮೋರೆ ಕೈಯಲ್ಲಿದ್ದ ಪಿಸ್ತೂಲ್ ನ ಕಸಿದೊಯ್ದಿದ್ದ ಅನ್ನೋದು ಅಮಿತ್ ಬದ್ದಿ ಮೇಲಿನ ಆರೋಪ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಕೂಡ ಸಿಕ್ಕಿವೆ. ಇದನ್ನಾಧರಿಸಿಯೇ ಎಸ್ಐಟಿ ಇಬ್ಬರನ್ನೂ ಬಂಧಿಸಿದೆ. ಆದ್ರೇ, ಇಬ್ಬರು ಬಡವರು. ದುಡಿದು ಅವರು ದುಡಿಯದಿದ್ರೇ ಕುಟುಂಬಗಳಿಗೆ ಬೇರೆ ಆಧಾರವೇ ಇಲ್ಲ. ಹಾಗಾಗಿ ಮಿಸ್ಕಿನ್ ಮತ್ತು ಬದ್ದಿ ಕುಟುಂಬ ಸದಸ್ಯರು ತಮ್ಮ ಮಕ್ಕಳು ನಿರಪರಾಧಿಗಳು, ಅವರಿಗೆ ಹೆಲ್ಪ್ ಮಾಡಿ ಅಂತ ಎಸ್ಎಸ್ಎಸ್ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ರಂತೆ. ಈ ಹಿನ್ನೆಲೆಯಲ್ಲಿಯೇ ಇವತ್ತು ಹುಬ್ಬಳ್ಳಿಯಲ್ಲಿ ಎಸ್ಎಸ್ಎಸ್ ಸೋಮವಂಶ ಕ್ಷತ್ರೀಯ ಸಮಾಜದ ಮುಖಂಡರ ನೇತೃತ್ವದಲ್ಲಿ ನೂರಾರು ಜನ ಮಿಸ್ಕಿನ್ ಹಾಗೂ ಬದ್ದಿ ನಿರಪರಾಧಿಗಳು, ಕೂಡಲೇ ಸತ್ಯಾಸತ್ಯ ವಿಚಾರಣೆ ನಡೆಸಿ ಬಿಡುಗಡೆ ಮಾಡ್ಬೇಕು ಅಂತ ತಹಶೀಲ್ದಾರ್ ರ ಮೂಲಕ ಮನವಿ ಪತ್ರ ಸಲ್ಲಿಸಿದ್ರು.
ಅಶೋಕ ಕಾಟವೆ, ಮಾಜಿ ಶಾಸಕ
ಕೊಲೆ ಕೇಸಿನಲ್ಲಿ ಬಂಧಿತರಾದ್ಮೇಲೆ ಎಸ್ಎಸ್ ಕೆ ಸಮಾಜದ ಮುಖಂಡರು ಸಭೆ ಕೂಡ ನಡೆಸಿದ್ರು. ಇಬ್ಬರು ಯುವಕರ ಬಗ್ಗೆ ಒಳ್ಳೇ ಅಭಿಪ್ರಾಯವಿದೆ. ಇಂಥ ಕೊಲೆ ಪ್ರಕರಣದಲ್ಲಿ ಭಾಗಿಯಾಗೋದಕ್ಕೆ ಸಾಧ್ಯವೇ ಇಲ್ಲ. ಈವರೆಗೂ ಯಾವುದೇ ರೀತಿ ಕಾನೂನುಬಾಹಿರ ಚಟುವಟಿಕೆಗಳನ್ನ ನಡೆಸಿಲ್ಲ. ಹಿರಿಯ ಪತ್ರಕರ್ತೆಯ ಕೊಲೆ ಮಾಡುವ ಹುನ್ನಾರ ನಡೆಸೋಕೆ ಸಾಧ್ಯವೇ ಇಲ್ಲ ಅನ್ನೋ ಅಭಿಪ್ರಾಯ ಸಮುದಾಯದ ಜನ ವ್ಯಕ್ತಪಡಿಸ್ತಿದಾರಂತೆ. ಇಷ್ಟಿದ್ರೂ ಹಿಂದೂ ಯುವಕರನ್ನೇ ಎಸ್ಐಟಿ ಟಾರ್ಗೆಟ್ ಮಾಡ್ತಿದೆ ಅನ್ನೋ ಆರೋಪವನ್ನೂ ಎಸ್ಎಸ್ ಕೆ ಸಮಾಜ ಮಾಡ್ತಿದೆ. ಇದಷ್ಟೇ ಅಲ್ಲ, ಜಸ್ಟೀಸ್ ಫಾರ್ ಅಮಿತ್ ಬದ್ದಿ, ಗಣೇಶ ಮಿಸ್ಕಿನ್ ಅನ್ನೋ ಅಭಿಯಾನ ಕೂಡ ನಡೆಸಲಾಗ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಗಣೇಶ ಮಿಸ್ಕಿನ್ ಮತ್ತು ಅಮಿತ್ ಬದ್ದಿ ಪರ ಪೋಸ್ಟ್ ಹಾಕಲಾಗ್ತಿದೆ. ಒಂದು ವೇಳೆ ತಕ್ಷಣವೇ ಮಿಸ್ಕಿನ್ ಹಾಗೂ ಬದ್ದಿಯನ್ನ ಬಿಡದಿದ್ರೇ ಉಗ್ರ ಹೋರಾಟ ನಡೆಸೋದಾಗಿ ಪ್ರತಿಭಟನಾಕಾರರು ಎಚ್ಚರಿಸಿದಾರೆ.
ನಾರಾಯಣಸಾ ಬಾಂಡಗೆ, ಮಾಜಿ ಎಂಎಲ್ಸಿ
ಇಬ್ಬರೂ ಯುವಕರು ಅಮಾಯಕರಾಗಿದ್ರೇ ಎಸ್ಐಟಿ ಯಾಕೆ ಬಂಧಿಸ್ತಾಯಿತ್ತು. ಅದರಲ್ಲೂ ಹುಬ್ಬಳ್ಳಿಗೇ ಬಂದು ಇವರನ್ನೇ ಬಂಧಿಸೋಕೆ ನಿಖರ ಕಾರಣ ಇರಲೇಬೇಕಲ್ವೇ.. ಇಬ್ಬರು ತಪ್ಪೇ ಮಾಡದಿದ್ರೇ ಅದಕ್ಕೆ ಕೋರ್ಟ್ ಇದೆ ಅಲ್ವೇ.. ಇದಕ್ಕೂ ಮೊದಲೇ ಸಮುದಾಯವನ್ನ ಮುಂದಿಟ್ಕೊಂಡು ಪ್ರತಿಭಟನೆ ನಡೆಸೋ ಆತುರವಾದರೂ ಏನಿತ್ಹೇಳಿ. ತಪ್ಪು ಯಾರ್ ಮಾಡಿದ್ರೇ ತಪ್ಪೇ ಅನ್ನೋದು ಕೂಡ ಅಷ್ಟೇ ಸತ್ಯ.
bigtvnews | Hubli Dharwad News | Kannada News | Karnataka News Hubli News | News In Hubli | Local news





