ಎಂಟು ತಿಂಗಳ ಗರ್ಭಿಣಿ ಮೇಲೆ 8 ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಮಂಗಳವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸತಾರ ಪ್ರದೇಶದ 20 ವರ್ಷ ವಯಸ್ಸಿನ 8 ತಿಂಗಳ ಗರ್ಭಿಣಿ ತನ್ನ ಗಂಡನೊಂದಿಗೆ ತಾಸ್ಗಾನ್‌ನಲ್ಲಿರುವ ಟರ್ಚಿ ಫಟಾಗೆ ತೆರಳಿದ್ದ ಸಂದರ್ಭದಲ್ಲಿ ನಡೆದಿದೆ.
ಮುಂಬೈ: ಎಂಟು ತಿಂಗಳ ಗರ್ಭಿಣಿ ಮೇಲೆ 8 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಈ ಸಂಬಂಧ ಮಹಾರಾಷ್ಟ್ರ ಮಹಿಳಾ ಸಮಿತಿ ಸ್ಥಳೀಯ ಪೋಲಿಸರಿಗೆ ವರದಿ ಸಲ್ಲಿಸುವಂತೆ ಕೋರಿದೆ.
ಈ ಘಾಟೆ ಮಂಗಳವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸತಾರ ಪ್ರದೇಶದ 20 ವರ್ಷ ವಯಸ್ಸಿನ 8 ತಿಂಗಳ ಗರ್ಭಿಣಿ ತನ್ನ ಗಂಡನೊಂದಿಗೆ ತಾಸ್ಗಾನ್‌ನಲ್ಲಿರುವ ಟರ್ಚಿ
ಫಟಾಗೆ ತೆರಳಿದ್ದ ಸಂದರ್ಭದಲ್ಲಿ ನಡೆದಿದೆ. ಆರೋಪಿ ಮುಕುಂದ್ ಮಾನೆ ಎಂಬಾತ ಹೋಟೆಲ್ ಕೆಲಸಕ್ಕೆ ದಂಪತಿ ಬೇಕಾಗಿದ್ದರೆ ಎಂದು ಹೇಳಿ, ಈ ದಂಪತಿಯನ್ನು ಕರೆಸಿಕೊಂಡಿದ್ದು, ಜೊತೆಗೆ 20 ಸಾವಿರ ರೂ. ಮುಂಗಡ ಹಣ ಪಾವತಿಸುವಂತೆ ಹೇಳಿದ್ದ ಎನ್ನಲಾಗಿದೆ.
ಆ ದಂಪತಿ ಆತ ಹೇಳಿದ್ದ ಸ್ಥಳಕ್ಕೆ ಬಂದ ಕೂಡಲೇ ದಂಪತಿ ಮೇಲೆ ಮುಕುಂದ್ ಮಾನೆ ಮತ್ತು ಇತರರು ಸೇರಿ ಪೈಪುಗಳು ಮತ್ತು ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಮಹಿಳೆಯ ಬಳಿಯಿದ್ದ ಹಣ ಮತ್ತು ಒಡವೆಗಳನ್ನು ದೋಚಿದ್ದಲ್ಲದೆ, ಆಕೆಯ ಗಂಡನನ್ನು ವಾಹನದೊಳಗೆ ಬಂಧಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ನಂತರ ಸಂತ್ರಸ್ತ ದಂಪತಿ ಪೋಲಿಸಾರಿಗೆ ದೂರು ನೀಡಿದ್ದು, ಆರೋಪಿ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆ ನಡೆದ 48 ಗಂಟೆ ಕಳೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





