Breaking News

ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರ್ತಿದ್ದಾರಂತೆ…..

ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ಭಾರತ ಈ ಬಾರಿ ಹೊಸ ಚರಿತ್ರೆ ಬರೆಯಲು ಎಲ್ಲ ಸಿದ್ಧತೆ ನಡೆಸಿದೆ. 2023ರ ಐಸಿಸಿ ವಿಶ್ವಕಪ್ ಕೊನೇ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಈ ಭಾನುವಾರ ಗುಜರಾತ್ ರಾಜಧಾನಿ ಅಹಮದಾಬಾದ್‌ನ ‘ನರೇಂದ್ರ ಮೋದಿ’ ಸ್ಟೇಡಿಯಂನಲ್ಲಿ 2023ರ ಐಸಿಸಿ ವಿಶ್ವಕಪ್ ಫೈನಲ್ ಮ್ಯಾಚ್ ನಡೆಯುತ್ತೆ. ಹೀಗಾಗಿ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರ್ತಿದ್ದಾರಂತೆ.

ಐಸಿಸಿ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯಕ್ಕೆ ತಯಾರಿ ಜೋರಾಗಿ ಸಾಗಿದೆ. ಇಡೀ ಜಗತ್ತಿನಲ್ಲೇ ದೊಡ್ಡ ಕ್ರಿಕೆಟ್ ಮೈದಾನ ಎಂಬ ಬಿರುದು ಪಡೆದ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಕ್ಕೆ ತಯಾರಿ ಅಬ್ಬರದಿಂದ ನಡೆದಿದೆ. ಈಗಾಗಲೇ ಪಂದ್ಯ ವೀಕ್ಷಣೆಗಾಗಿ ಗಣ್ಯರ ಪಡೆಯನ್ನೇ ಕರೆಯಲಾಗಿದೆ. ಈ ಪೈಕಿ, ಭಾರತಕ್ಕೆ 2 ಬಾರಿ ವಿಶ್ವಕಪ್ ತಂದುಕೊಟ್ಟಿರುವ ಮಾಜಿ ಕ್ಯಾಪ್ಟನ್ಸ್ ಕೂಡ ಬರಲಿದ್ದಾರೆ. ಜೊತೆಗೆ, ಈಗ ದೇಶದ ಪ್ರಧಾನಿ ಮೋದಿ ಅವರಿಗೂ ವಿಶೇಷ ಆಹ್ವಾನ ನೀಡಲಾಗಿದೆಯಂತೆ.

ಇದೇ ಭಾನುವಾರ ಅಂದ್ರೆ ನವೆಂಬರ್ 19ರಂದು 2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ಗಣ್ಯ ವ್ಯಕ್ತಿಗಳಿಗು ಈಗಾಗಲೇ ಆಹ್ವಾನ ನೀಡಲಾಗಿದೆ. ಈಗ ದೇಶದ ಮುಖ್ಯಸ್ಥರಾದ ಪ್ರಧಾನಿ ಮೋದಿ ಅವರನ್ನ ವಿಶೇಷವಾಗಿ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಂ ಮೋದಿ ಅವ್ರು ನವೆಂಬರ್ 19ಕ್ಕೆ ಅಹಮದಾಬಾದ್‌ನ ‘ನರೇಂದ್ರ ಮೋದಿ’ ಕ್ರೀಡಾಂಗಣಕ್ಕೆ ಬಂದು, ಭಾರತ ತಂಡದ ಬೆನ್ನುತಟ್ಟುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ.

Share News

About BigTv News

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *