Breaking News
Featured Video Play Icon

ವಾಣಿಜ್ಯ ನಗರಿಯಲ್ಲಿ ರಂಗಪಂಚಮಿ‌ ಕಲರವ: ಕಲರ್ ಕಲರ್ ಬಣ್ಣಗಳಲ್ಲಿ‌ ಮಿಂದೆದ್ದ ಹುಬ್ಬಳ್ಳಿಗರು..

ಹುಬ್ಬಳ್ಳಿ; ಐತಿಹಾಸಿಕ ಹೋಳಿ ಹುಣ್ಣಿಮೆಯ ಅಂಗವಾಗಿ ಆಚರಿಸಲಾಗುವ ರಂಗಪಂಚಮಿ‌ ಹಬ್ಬದ ಸಂಭ್ರಮ ವಾಣಿಜ್ಯನಗರಿಯಲ್ಲಿ ಮನೆ ಮಾಡಿದೆ. ಕಲರ್ ಕಲರ್ ಬಣ್ಣಗಳಲ್ಲಿ ಹುಬ್ಬಳ್ಳಿ ಜನರು ಮಿಂದೆದ್ದಿರು. ಬೆಳ್ಳಂಬೆಳ್ಳಿಗೆ ರಂಗಪಂಚಮಿಗೆ ಚಾಲನೆ ದೊರೆತಿದ್ದು, ಬಣ್ಣಗಳಲ್ಲಿ ಜನತೆ ಕಲರ್ ಫುಲ್ ಆಗಿ ಕಾಣುವ ದೃಶ್ಯಗಳು‌‌ ಸಾಮಾನ್ಯವಾಗಿದ್ದವು.ಹೌದು.. ನಗರದ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಕಮರಿಪೇಟೆ, ದಾಜಿಬಾನಪೇಟೆ, ಬಾನಿ ಓಣಿ, ಮ್ಯಾದಾರ ಓಣಿ, ಮರಾಠ ಗಲ್ಲಿ, ಬಮ್ಮಾಪುರ ಓಣಿ, ಹಳೇ ಹುಬ್ಬಳ್ಳಿ, ಚನ್ನಪೇಟ, ನೇಕಾರ ನಗರ, ನವನಗರ ಮತ್ತಿತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ ಸಂಭ್ರಮ ಮನೆ ಮಾಡಿತ್ತು.‌ಹುಣ್ಣಿಮೆ ದಿನದಂದು ನಗರದ ಮ್ಯಾದಾರ ಓಣಿ, ಮರಾಠ ಗಲ್ಲಿ, ಬ್ಯಾಳಿ ಓಣಿ ಇತರೆಡೆ ಒಟ್ಟು 460ಅಧಿಕ ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಹುಣ್ಣಿಮೆ ದಿನದಂದೇ ಈ ಮೂರ್ತಿಗಳನ್ನು ದಹಿಸಿದರೆ, ಬಹಳಷ್ಟು ಮೂರ್ತಿಗಳನ್ನು ರಂಗಪಂಚಮಿ ದಿನವಾದಂದು ಮೆರವಣಿಗೆ ನಡೆಸಿದ ನಂತರ ದಹಿಸುವ ಪದ್ದತಿ ನಡೆದುಕೊಂಡು ಬಂದಿದ್ದು, ಮೂರ್ತಿಗಳ ಮೆರವಣಿಗೆ ಉದ್ದಕ್ಕೂ ಜನರು ಗುಲಾಲ್ ಆಡಿದರು. ಕುಟುಂಬ ಸಮೇತ ಬಂದು ರತಿ-ಮನ್ಮಥ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬಹಳಷ್ಟು ಕಡೆಗೆ ಬಣ್ಣದ ಗಡಿಗೆಗಳನ್ನು ಒಡೆದು ಖುಷಿಪಟ್ಟರು.ಯುವಕ ಯುತಿಯರು ನಗರದ ವಿವಿಧ ಪ್ರದೇಶದಲ್ಲಿ ಡಿಜೆ ಹಾಡುಗಳಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಸ್ತೆಗಳಲ್ಲಿ ಬಣ್ಣದ ಬ್ಯಾಗಳನ್ನು ಹಿಡಿದು ಬೈಕ್ ಮೇಲೆ ಸುತ್ತಾಡಿ ಎದುರಿಗೆ ಬಂದವರಿಗೆ ಸೇರಿದಂತೆ, ತಮ್ಮ ಆತ್ಮೀಯರಿಗೆ ಬಣ್ಣ ಹಚ್ಚುವ ಮೂಲಕ ಯುವ ಸಮುದಾಯ ರಂಗಪಂಚಮಿಯ ಶುಭಾಶಯಗಳ್ಲನ್ನು ಕೋರಿದ್ದರು.‌ ಒಟ್ಟಿನಲ್ಲಿ ಶನಿವಾರದಂದು ವಾಣಿಜ್ಯ ನಗರಿ ಹುಬ್ಬಳ್ಳಿ ಬಣ್ಣದ ನಗರಿಯಾಗಿ ಮಾರ್ಪಾಡಗಿದ್ದು ಸುಳ್ಳಲ್ಲ.

Share News

About Shaikh BigTv

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *