Breaking News

ಚಲಿಸುವ ರೈಲಿನಲ್ಲಿ ಮೂಡಿದ ಪ್ರೀತಿ, ಪ್ರೇಯಸಿ ಹುಡುಕಲು ಆತ ಮಾಡಿದ ಪ್ಲಾನ್ ಏನು?

ನವದೆಹಲಿ: ಮೊದಲ ಪ್ರೀತಿ ಕೊನೆವರೆಗೂ ನೆನಪಿನಲ್ಲಿರುತ್ತದೆ ಎಂದು ಹೇಳುತ್ತಾರೆ. ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಹಲವರು ಹೇಳುತ್ತಾರೆ. ಕೊಲ್ಕತ್ತಾದ ಒಬ್ಬ ಹುಡುಗನಿಗೂ ಇದೇ ರೀತಿಯ ಆಗಿದೆ. ವಾಸ್ತವವಾಗಿ ಕೊಲ್ಕತ್ತಾದ ಒಬ್ಬ ವ್ಯಕ್ತಿಗೆ ಒಂದು ದಿನ ರೈಲಿನಲ್ಲಿ ಪ್ರಯಾಣಿಸುವ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯನ್ನು ನೋಡಿದೊಡನೆ ಪ್ರೀತಿ ಮೂಡಿದೆ. ಕೆಲ ದಿನಗಳ ಆ ವ್ಯಕ್ತಿ ತನ್ನ ಪ್ರೇಯಸಿಯನ್ನು ಹುಡುಕುವುದು ಹೇಗೆ ಎಂದು ಯೋಚಿಸಿದ್ದಾನೆ. ಆ ಹುಡುಗಿಯನ್ನು ಹುಡುಕಲು ಸಾಧ್ಯವಾಗದ ಕಾರಣ ಆ ಹುಡುಗ ಚಿತ್ರವೊಂದನ್ನು ತಯಾರಿಸಿ, ನಾಲ್ಕು ಸಾವಿರ ಪೋಸ್ಟರ್ ಗಳಲ್ಲಿ ತನ್ನ ಸಂದೇಶವನ್ನು ಕಳುಹಿಸಿದನು. ಆ ಚಿತ್ರದ ಹೆಸರು ‘ಕೊನ್ನಾಗರ್ ಕೌನ್’. ಅಂದರೆ ಕೊನ್ನಾಗರದ ವಧು ಎಂದರ್ಥ. 6 ನಿಮಿಷ ಮೂವತ್ತು ಸೆಕೆಂಡ್ ಗಳ ಈ ಚಲನಚಿತ್ರದಲ್ಲಿ ಆತ ತಾನು ಆ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಮತ್ತು ಆಕೆಯನ್ನು ಭೇಟಿಯಾಗಲು ಬಯಸುವುದಾಗಿ ಹುಡುಗಿಗೆ ಸಂದೇಶವನ್ನು ನೀಡಿದ್ದಾನೆ. 
ವಿಶ್ವಜಿತ್ ಪೊಡ್ಡಾರ್ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ:
ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಕೊಲ್ಕತ್ತಾದಲ್ಲಿ ನೆಲೆಸಿರುವ 29 ವರ್ಷದ ವಿಶ್ವಜಿತ್ ಪೊಡ್ಡಾರ್ ಸರ್ಕಾರಿ ಕಚೇರಿವೊಂದರಲ್ಲಿ ಕೆಲಸದ್ದಾರೆ. ವಿಶ್ವಜಿತ್ ಪೊಡ್ಡಾರ್ ರಾಜ್ಯ ಪರಿಸರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರು ಪ್ರತಿದಿನ ರೈಲಿನಲ್ಲೇ ಪ್ರಯಾಣಿಸುತ್ತಾರೆ. ಆದರೆ ಜುಲೈ ನಲ್ಲಿ ಒಂದು ದಿನ ಅವರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಒಂದು ಹುಡುಗಿಯನ್ನು ನೋಡಿದ್ದಾರೆ. ಆ ಹುಡುಗಿಯನ್ನು ನೋಡಿದೊಡನೆ ಅವರಿಗೆ ಹುಡುಗಿಯ ಮೇಲೆ ಪ್ರೀತಿ ಮೂಡಿದೆ. ಆದರೆ, ಆ ಸಮಯದಲ್ಲಿ ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ಈಗ ಆ ಹುಡುಗಿಯನ್ನು ಹುಡುಕುವ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಆ ಹುಡುಗಿಯನ್ನು ಹುಡುಕಲು, ವಿಶ್ವಜಿತ್ ಅವರು ಚಿತ್ರವೊಂದನ್ನು ನಿರ್ಮಿಸಿ ನಗರದಾದ್ಯಂತ 4 ಸಾವಿರ ಪೋಸ್ಟರ್ಗಳನ್ನು ಹಾಕಿದರು. ಆ ಭಿತ್ತಿಪತ್ರದಲ್ಲಿ ವಿಶ್ವಜಿತ್ ತಮ್ಮ ಮೊಬೈಲ್ ಸಂಖ್ಯೆಯನ್ನು ನಿರ್ಮಿಸಿದ್ದಾರೆ ಮತ್ತು ಆ ಚಿತ್ರವನ್ನು ಯೂ ಟ್ಯೂಬ್ ನಲ್ಲಿ ಲಿಂಕ್ ಮಾಡಿದ್ದಾರೆ.  ‘ನಾನು ಜನರಿಗೆ ಹುಚ್ಚನಾಗಿ ಕಾಣಬಹುದೆಂದು ನನಗೆ ತಿಳಿದಿದೆ, ಆದರೆ ನಾನು ಹುಡುಗಿಗೆ ಕೆಟ್ಟ ಹೆಸರು ತರಲು ಬಯಸುವುದಿಲ್ಲ. ಆ ಹುಡುಗಿಯ ತನಕ ನನ್ನ ಮನದಾಳದ ಪ್ರೀತಿಯ ಮಾತುಗಳನ್ನು ಕೊಂಡೊಯ್ಯಲು ಬಯಸುತ್ತಿದ್ದೇನೆ ಎಂದು ವಿಶ್ವಜೀತ್ ತಿಳಿಸಿದ್ದಾರೆ. ಅದಕ್ಕಾಗಿಯೇ ಅವರು ಈ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.” ಚಿತ್ರದ ಕೊನೆಯಲ್ಲಿ, ಅವರು ನಿಲ್ದಾಣದಲ್ಲಿ ಕುಳಿತು ಕಾಯುತ್ತಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *