Breaking News

ನೋಟು ನಿಷೇಧ, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಪ್ರಮಾದ ಹಾಗೂ ಲೂಟಿ: ಕಾಂಗ್ರೆಸ್.

ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ
ಬೆಂಗಳೂರು: ನೋಟು ನಿಷೇಧ ಹಾಗೂ ರಫೇಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರು ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಸುದ್ದಿಗಾರರೊಂದಿಕೆ ಮಾತನಾಡಿದ ಅವರು, ನೋಟು ನಿಷೇಧ ಅತೀ ದೊಡ್ಡ ಪ್ರಮಾದವಾಗಿದ್ದು, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಲೂಟಿಯಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಳ್ಳುತ್ತಿರುವ ಮೋದಿ ಸರ್ಕಾರ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ ತನಿಖೆ ನಡೆಸಲಿ. ಉದ್ಯಮಿ ಅನಿಲ್ ಅಂಬಾನಿ ಮೋದಿ ಹಾಗೂ ವಿಮಾನಯಾನ ನಡುವಿನ ದಲ್ಲಾಳಿಯಾಗಿದ್ದಾರೆಂದು ಹೇಳಿದ್ದಾರೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *