ಬಿಜೆಪಿಯಿಂದ ನಟ ಮೋಹನ್ ಲಾಲ್ ರನ್ನು ಲೋಕಸಭೆಗೆ ಕಣಕ್ಕಿಳಿಸಲು ಆರ್.ಎಸ್.ಎಸ್ ಪ್ಲಾನ್

ನವದೆಹಲಿ: ಮಲಯಾಳಂ ನಟ ಮೋಹನ್ ಲಾಲ್ ರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಿರುವಂತಪುರಮನಿಂದ ಬಿಜೆಪಿ ಪರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಆರ್ ಎಸ್ ಎಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತಾಗಿ ಈಗಾಗಲೇ ಆರ್ ಎಸ್ ಎಸ್ ಅವರನ್ನು ಸಂಪರ್ಕಿಸಲಾಗಿದೆ ಎಂದು  ಹೇಳಲಾಗಿದೆ.ಹಿರಿಯ ನಾಯಕರು ಹೇಳುವಂತೆ ” ಸಂಘಪರಿವಾರದಲ್ಲಿ ಮೋಹನ್ ಲಾಲ್ ಅವರನ್ನು ಚುನಾವಣೆಗೆ ಇಳಿಸುವ ಕುರಿತಾಗಿ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.ಆದರೆ ಈ ನಟನೊಂದಿಗಿನ ಸಭೆಯ ವಿಚಾರವಾಗಿ ಬಿಜೆಪಿ ನಾಯಕರ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ಇದಕ್ಕೆಲ್ಲ ಪೂರಕವೆನ್ನುವಂತೆ ಇತ್ತೀಚಿಗೆ ಮೋಹನ್ ಲಾಲ್  ವಾಯ್ನಾಡ್ನಲ್ಲಿರುವ ತಮ್ಮ ಫೌಂಡೆಶನ್ ನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ.
ಮೋಹನ್ ಲಾಲ್ ಅವರ ಈ ವಿಶ್ವಶಾಂತಿ ಫೌಂಡೆಶನ್ ಈಗಾಗಲೇ ಆರ್.ಎಸ್.ಎಸ್ ಗೆ ಸಂಬಂಧಿಸಿದ ಸೇವಾ ಭಾರತಿಯಂತಹ ಸಂಘಟನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಒಂದು ವೇಳೆ ಆರ್ ಎಸ್ ಎಸ್ ನ ಒತ್ತಾಯಕ್ಕೆ ಮೋಹನ್ ಲಾಲ್ ಸ್ಪಂಧಿಸಿದ್ದೆ ಆದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಸುವುದು ಗ್ಯಾರಂಟಿ.

Share News

About Shaikh BIG TV NEWS, Hubballi

Check Also

ರಾಜ್ಯದಲ್ಲಿ ಇಂದು ರಾತ್ರಿ 8 ರಿಂದ ನೈಟ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 8 …

Leave a Reply

Your email address will not be published. Required fields are marked *

You cannot copy content of this page