Breaking News

ತುಳುವರ ಆಷಾಡ ಆಟಿ ಅಮವಾಸ್ಯೆ.

ಮಂಗಳೂರು: ಆಷಾಢ ಮಾಸವನ್ನು ತುಳುವರು ಆಟಿ ಎನ್ನುವರು. ಈ ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯಂದು ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಆಟಿ ಕಷಾಯ ಸೇವನೆ ಮಾಡುವ ಸಂಪ್ರದಾಯವಿದೆ. ಆಟಿ ಅಮಾವಾಸ್ಯೆಯಂದು ಕುಡಿಯುವ ಆಟಿ ಕಷಾಯದ ಬಗ್ಗೆ ನಿಮಗೆ ಗೊತ್ತೇ?

ತುಳುವರು ಆಹಾರದಲ್ಲಿಯೇ ಔಷಧವನ್ನು ಸೇವಿಸುತ್ತಾರೆ.‌ ಯಾವ ವಸ್ತುವಿನಲ್ಲಿ ಯಾವ ರೀತಿಯ ಔಷಧೀಯ ಗುಣವಿದೆ ಎನ್ನುವ ಸಂಗತಿ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ.‌ ಮರ, ತೊಗಟೆ, ಹುಲ್ಲು, ಪಥ್ಯ ಹಾಗು ಆಹಾರದಲ್ಲಿ ರೋಗಗಳನ್ನು ಗುಣಪಡಿಸುವ ವಿಧಾನವಿದು. ಆದ್ದರಿಂದ ತುಳುವರಿಗೆ ಮದ್ದು ಮಾಡುವ ವಿಧಾನ, ಆಹಾರ ಪದ್ಧತಿ ಒಂದು ಸಂಸ್ಕೃತಿ ಎನ್ನಲು ಅಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ರೋಗ ನಿರೋಧಕವಾಗಿ ಹಾಲೆ ಮರದ ತೊಗಟೆಯ ರಸವನ್ನು ಔಷಧವಾಗಿ ಸೇವಿಸುವ ‘ಆಟಿ ಅಮಾವಾಸ್ಯೆ’ ಆಚರಣೆ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.ತುಳುನಾಡು ಎಂದು ಪರಿಗಣಿತವಾದ ಕಾಸರಗೋಡು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾದ್ಯಂತ ಇಂದು ತುಳುವರು ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡುತ್ತಿದ್ದಾರೆ. ಹಾಲೆ ಮರದ ರಸದ ಕಷಾಯ ಸೇವಿಸುತ್ತಾರೆ. ತುಳುವರಿಗೆ (ಸೌರಮಾನ ಪದ್ಧತಿಯಂತೆ) ನಾಲ್ಕನೇಯ ತಿಂಗಳು ಕರ್ಕಾಟಕ ಮಾಸ. ಇದನ್ನು ತುಳುವರು ಆಟಿ (ಆಷಾಢ) ಎಂದು ಕರೆಯುತ್ತಾರೆ

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *