Breaking News

ರ್ಕಾರವು ಬಿದ್ದು ಹೋಗಬಹುದು- ಈಶ್ವರಪ್ಪ ಬಾಂಬ್

ನವದೆಹಲಿ:ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ರಾಜ್ಯ ರಾಜಕಾರಣ ಹೇಗೆ ಬದಲಾಗುತ್ತೆ ಅಂತಾ ಕಾದು ನೋಡಿ, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು,ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಬಹುದು ಅಥವಾ ಸರ್ಕಾರವೇ ಬಿದ್ದು ಹೋಗಬಹುದು” ಎನ್ನುವ ಮೂಲಕ ಈಗ ಈ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಯಡಿಯೂರಪ್ಪನವರು ಐಟಿ ಇಲಾಖೆಗೆ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಈಗ ಪ್ರತಿಕ್ರಿಯಿಸಿದ ಈಶ್ವರಪ್ಪ ಸಿಬಿಐ ಮತ್ತು ಇಡಿ ಮೇಲೆ ಅನುಮಾನ ಪಡುವ ಅಗತ್ಯ ಇಲ್ಲ,ಈ ಹಿಂದೆ ಕೂಡ ಸಿಬಿಐ ಮತ್ತು ಇಡಿ ಹಲವರು ಭ್ರಷರನ್ನು ಹಿಡಿದಿದೆ.ಆದ್ದರಿಂದ ಈಗ ನಾವು ಸಮ್ಮಿಶ್ರ ಸರ್ಕಾರವನ್ನು ನಾವು ಅಸ್ಥಿರಗೊಳಿಸಬೇಕಾದ ಅಗತ್ಯ ಇಲ್ಲ. ಅದು ಕಾಂಗ್ರೆಸ್ ಕಿತ್ತಾಟದಿಂದಲೇ  ಬಿದ್ದು ಹೋಗಲಿದೆ “ಎಂದು ತಿಳಿಸಿದರು
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *