Breaking News

ವಾಣಿಜ್ಯ ನಗರಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಗೋಸಾಗಾಣಿಕೆ

ಹುಬ್ಬಳ್ಳಿ: ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮಗೋ ಸಾಗಾಣಿಕೆ. ಕಸಾಯಿಖಾನೆಗೆ ಗೋವುಗಳನ್ನುರಾಜಾರೋಷವಾಗಿ ಕೊಂಡೊಯ್ಯುಲಾಗುತ್ತಿದೆ.ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆಒಂದಿಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದರೂಕೂಡ ಕಡಿವಾಣ ಮರೀಚಿಕೆಯಾಗಿದೆ.ಹೌದು ಚೋಟಾ ಮುಂಬೈ ಖ್ಯಾತಿಯಹುಬ್ಬಳ್ಳಿಯಲ್ಲಿ ಇಂತಹ ಕಾನೂನು ಬಾಹಿರಕೃತ್ಯಗಳಿಗೆ ಕಡಿವಾಣವಿಲ್ಲದಾಗಿದೇ ಹಾಡಹಗಲೇಮಾರುಕಟ್ಟೆಯಿಂದ ಕಸಾಯಿಖಾನೆಗೆ ಗೋವುಗಳನ್ನುಕೊಂಡೊಯ್ಯುತ್ತಿದ್ದರೂ ಕೂಡ ಪೊಲೀಸ್ ಇಲಾಖೆಕಣ್ಣು ಮುಚ್ಚಿ ಕುಳಿತಿರುವುದು ಪೊಲೀಸ್ ಇಲಾಖೆಯವರ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹುಬ್ಬಳ್ಳಿಯ ಗೋಕುಲ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬೈಪಾಸ್ ಬಳಿ ಯಾವುದೇ ಭಯವಿಲ್ಲದೇ ರಾಜಾರೋಷವಾಗಿಅಕ್ರಮ ಗೋ ಸಾಗಾಣಿಕೆ ನಡೆಯುತ್ತಿದೆ.ಇದು ಸುಮಾರು ದಿನಗಳಿಂದ ನಡೆಯುತ್ತಿರುವ ಮಾಫಿಯಾ ಇದಾಗಿದೆ ಎಂದು ಶಂಕಿಸಲಾಗಿದೆ.ಭಾರತ ದೇಶ ಗೋವುಗಳನ್ನು ದೇವ ಸ್ವರೂಪದಲ್ಲಿ ಕಂಡು ಪೂಜಿಸುವ ಪರಂಪರೆಯನ್ನು ಹೊಂದಿದ್ದು,ಅದಕ್ಕೆ ಅನುಗುಣವಾಗಿಕೇಂದ್ರ ಸರ್ಕಾರ ಗೋ ಹತ್ಯ ನಿಷೇದ ಕಾಯಿದೆಯನ್ನುಜಾರಿಗೊಳಿಸಿದ್ದರೂ ಕೂಡ ವಾಣಿಜ್ಯನಗರದಲ್ಲಿ ಯಾವುದೇ ಅಂಕುಶವಿಲ್ಲದೇ ಅಕ್ರಮ ಗೋ ಸಾಗಾಣಿಕಾ ಮಾಫಿಯಾ ನಡೆಯುತ್ತಿದೆ.ಪೊಲೀಸ್ ಇಲಾಖೆಯ ನಿಷ್ಕಾಳಜಿ: ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಗೋಕುಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರು ಕೂಡ ಯಾವುದೇ ಸೂಕ್ತ ಕ್ರಮವನ್ನು ಜರುಗಿಸದೇ ಇರುವುದರಿಂದ ಅಕ್ರಮ ಗೋ ಸಾಗಾಣಿಕೆ ಧನಾತ್ಮಕ ಬೆಂಬಲ ದೊರೆತಂತಾಗಿದೆ. ಒಟ್ಟಾರೆಯಾಗಿ ಪೊಲೀಸ್ ಇಲಾಖೆಯ ನಿಷ್ಕಾಳಜಿಯಿಂದಾಗಿ ಅಂಕುಶವಿಲ್ಲದೇ ಅಕ್ರಮ ಅವ್ಯವಹಾರಗಳು ನಡೆಯುತ್ತಿದೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *