ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ಕುರಿತು ಎರಡು ಆಯಾಮಗಳಲ್ಲಿ ಪರಿಣಾಮ ಬೀರಬಹುದಾದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಹೊರಡಿಸಿದೆ.
ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ನಮಾಜ್ ಅನ್ನು ಯಾವುದೇ ಸ್ಥಳದಲ್ಲಿ ಬೇಕಾದರೂ ಮಾಡಬಹುದು, ಅದಕ್ಕೆ ನಿಗದಿತ ಮಸೀದಿಯೇ ಬೇಕು ಅಂತೇನೂ ಇಲ್ಲ ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬಹುಮತದ ತೀರ್ಪನ್ನು ನೀಡಿದೆ. ಜತೆಗೆ ರಾಮ ಜನ್ಮಭೂಮಿ ವಿವಾದ ಸಂಬಂಧದ ಅಂತಿಮ ತೀರ್ಪಿನ ವಿಚಾರಣೆ ಅಕ್ಟೋಬರ್ 29 ರಿಂದ ತ್ವರಿತಗತಿಯಲ್ಲಿ ನಡೆಸಬೇಕು ಅಂತಾನೂ ಇದೇ ಸಂದರ್ಭದಲ್ಲಿ ಸೂಚಿಸಿದೆ.
ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಅಯೋಧ್ಯೆ ತೀರ್ಪಿನ ಅಂತಿಮ ವಿಚಾರಣೆ ಆಕ್ಟೋಬರ್ 29 ರಿಂದ ಆರಂಭ ಆಗೋದು ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಎರಡು ಆಯಾಮಗಳ ಸುಪ್ರೀಂ ಆದೇಶವು ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರುವಂತಹುದ್ದಾಗಿದೆ. ಯಾಕಂದ್ರೆ ಈ ಹಿಂದೆ ಅಂತಿಮ ತೀರ್ಪಿನ ವಿಚಾರಣೆಯನ್ನ ಕಾಂಗ್ರೆಸ್, ಲೋಕಸಭೆ ಚುನಾವಣೆ ಮುಗಿದ ಬಳಿಕ ನಡೆಯಲಿ ಅಂತಾ ಆಶಿಸಿತ್ತು. ತನ್ಮೂಲಕ ಅಂತಿಮ ತೀರ್ಪಿನ ವಿಚಾರಣೆ ಲೋಕ ಚುನಾವಣೆ ಮೇಲೆ ಪರಿಣಾಮ ಬೀರುವುದು ಬೇಡ ಎಂದು ಬಯಸಿತ್ತು. ಆದ್ರೆ ಇದೀಗ ಬಿಜೆಪಿಗೆ ಈ ಸುಪ್ರೀಂ ಸೂಚನೆ, ಬಯಸದೇ ಬಂದ ಭಾಗ್ಯದಂತಿದೆ.
ಒಂದೆಡೆ, ಈ ಕ್ಷಣಕ್ಕೆ.. ನಮಾಜ್ ಮಾಡೋಕ್ಕೆ ಮಸೀದಿಯೇ ಬೇಕೆಂದೇನೂ ಇಲ್ಲ. ಎಲ್ಲಿ ಬೇಕಾದ್ರೂ ಮಾಡಬಹುದು ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ಪುನರುಚ್ಚರಿಸಿರುವುದು, ಅಯೋಧ್ಯೆ ಭೂ ವಿವಾದದ ಮೇಲೆ ಪರಿಣಾಮ ಬೀರುವಂತಹುದಾಗಿದೆ. ಅದು ಮುಸ್ಲಿಂ ಅರ್ಜಿದಾರರಿಗೆ ಒಲ್ಲದ ತೀರ್ಪಾಗಿದೆ. ಯಾಕಂದ್ರೆ ಸುಪ್ರೀಂ ಜಡ್ಜ್ಮೆಂಟ್ ಜಾರಿಯಾದ್ರೆ ಅಯೋಧ್ಯೆ ಭೂ-ವಿವಾದದ ಮೇಲೆ ತನ್ನ ಹಿಡಿತ ತಪ್ಪುತ್ತದೆ. ಜತೆಗೆ, ಸುಪ್ರೀಂಕೋರ್ಟಿನ ಇಂದಿನ ಸೂಚನೆಯಂತೆ ಅಯೋಧ್ಯೆ ಭೂ-ವಿವಾದ ವಿಚಾರಣೆಯೂ ಯಾವುದೇ ಅಡೆತಡೆಯಿಲ್ಲದೆ, ತ್ವರಿವಾಗಿ ಅಂತಿಮ ವಿಚಾರಣೆಯತ್ತ ಸಾಗುತ್ತದೆ.
ಅಂದ್ರೆ ಇದೆಲ್ಲವೂ, ಅತ್ತ ದೇಶವು ಸಾರ್ವತ್ರಿಕ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಸಮಯದಲ್ಲೇ ನಡೆಯುತ್ತದೆ ಎಂಬುದು ಗಮನಾರ್ಹ. ಅಂದ್ರೆ, ಅದು ಚುನಾವಣೆ ಮೇಲೆ ಪರಿಣಾಮ ಬೀರುವಂತಹದ್ದಾಗಿರುತ್ತದೆ. ಆದ್ರೆ ಅಂತಿಮ ವಿಚಾರಣೆ ಏನಾದ್ರೂ ವಿಳಂಬವಾದ್ರೆ.. ಚುನಾವಣೆ ಮೇಲೆ ಅದು ಯಾವುದೇ ಪರಿಣಾಮ ಬೀರಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





