ರಾಮನಗರ: ರಾಸಲೀಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಬಿಡದಿ ನಿತ್ಯಾನಂದ ಸ್ವಾಮಿ ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಕೋರ್ಟ್ಗೆ ಹಾಜರಾಗದೇ ಮೇಲ್ಮನವಿ ಸಲ್ಲಿಸಿಕೊಂಡು ದಿನ ದೂಡುತ್ತಿದ್ದಾನೆ ಅಂತಾ ಸರ್ಕಾರಿ ಪರ ವಕೀಲ ವಡವಡಗಿ ಮಾಹಿತಿ ನೀಡಿದ್ದಾರೆ. ಕಳೆದ ಮೂರು ವಿಚಾರಣೆಗೆ ನಿತ್ಯಾನಂದ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಇನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಸತ್ರ ನ್ಯಾಯಲಯದಲ್ಲಿ ಇಂದು ವಿಚಾರಣೆ ನಡೆಯಬೇಕಿತ್ತು. ಆದ್ರೆ ನಿತ್ಯಾನಂದ ಸೇರಿದಂತೆ ಎಲ್ಲಾ ಆರೂ ಜನ ಆರೋಪಿಗಳೂ ಇವತ್ತೂ ಕೂಡಾ ಗೈರಾಗಿದ್ದಾರೆ. ಇನ್ನು ಕೋರ್ಟ್ ಆದೇಶ ಪ್ರಶ್ನಿಸಿ ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





