Breaking News

ಡ್ರೋಣ್, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ದಸರಾ: ಆಯುಕ್ತ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ರಾಜ್ಯದ ಬೇರೆಬೇರೆ ಕಡೆಯಿಂದ ಸುಮಾರು 3 ಸಾವಿರ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ಹೇಳಿದ್ರು.
ಇದಕ್ಕಾಗಿ ಪೊಲೀಸ್ ಕಮಾಂಡೋ ವೆಹಿಕಲ್ ಬಳಕೆ ಮಾಡಲಾಗುತ್ತದೆ. ಪೊಲೀಸ್ ಕಮಾಂಡೋ ವೆಹಿಕಲ್​ನಲ್ಲಿ ನಾಲ್ಕು ಸುತ್ತಿನಲ್ಲೂ ಮೊಬೈಲ್​-ಮಾನವ ಸಿಸಿಟಿವಿಗಳಿರುತ್ತವೆ. ನಾಲ್ಕು ಡ್ರೋಣ್​ ಕ್ಯಾಮೆರಾಗಳನ್ನು ದಸರಾ ಮಹೋತ್ಸವಕ್ಕೆ ಬಳಕೆ ಮಾಡಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲೆಲ್ಲಾ ಡ್ರೋಣ್ ಕ್ಯಾಮೆರಾ ಕಣ್ಗಾವಲಿರುತ್ತದೆ ಎಂದರು.
ಹೆಚ್ಚುವರಿಯಾಗಿ ಜಂಬೂಸವಾರಿ ಮಾರ್ಗದಲ್ಲಿ 60 ಸಿಸಿಟಿವಿ ಬಳಕೆ ಮಾಡಲಾಗುವುದು. ಕಳೆದ ಬಾರಿ ವಿವಿಐಪಿ ಪಾಸ್​ಗಳ ಗ್ಯಾಲರಿಯಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಕಳೆದ ಬಾರಿಯಾದ ಸಮಸ್ಯೆಗಳನ್ನು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ದಸರಾ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಸುಬ್ರಮಣ್ಯೇಶ್ವರ್ ರಾವ್ ಮಾಹಿತಿ ನೀಡಿದ್ರು.
Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *